Asianet Suvarna News Asianet Suvarna News

ರಾಜಧಾನಿ ಬೆಂಗಳೂರಿನಲ್ಲಿ ಹೀನ ಕೃತ್ಯ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ

ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವಂತಹ ಹೀನಕೃತ್ಯ ರಾಜಧಾನಿಯಲ್ಲಿ ನಡೆದಿದೆ. ಗಿರನಗರ ಸಮೀಪದ ವೀರಭದ್ರನಗರ ಮನೆಯೊಂದರಲ್ಲಿ ಬಾಲಕಿ ಶವ ಪತ್ತೆಯಾಗಿದ್ದು ಅತ್ಯಾಚಾರ ನಡೆಸಿರುವ ಕಾಮುಕ ಅನಿಲ್ ಪರಾರಿಯಾಗಿದ್ದಾನೆ.

6 Year Girl Raped And Then Killed
  • Facebook
  • Twitter
  • Whatsapp

ಬೆಂಗಳೂರು(ಎ.24): ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವಂತಹ ಹೀನಕೃತ್ಯ ರಾಜಧಾನಿಯಲ್ಲಿ ನಡೆದಿದೆ. ಗಿರನಗರ ಸಮೀಪದ ವೀರಭದ್ರನಗರ ಮನೆಯೊಂದರಲ್ಲಿ ಬಾಲಕಿ ಶವ ಪತ್ತೆಯಾಗಿದ್ದು ಅತ್ಯಾಚಾರ ನಡೆಸಿರುವ ಕಾಮುಕ ಅನಿಲ್ ಪರಾರಿಯಾಗಿದ್ದಾನೆ.

ಬಾಲಕಿ ಏ. 20ರಂದು ಸಂಜೆ 6 ಗಂಟೆ ಸುಮಾರಿಗೆ ಕಾಣೆಯಾಗಿದ್ದಳು. ಮನೆ ಸುತ್ತಮುತ್ತ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದ ಪೋಷಕರು, ಮರುದಿನವೇ ಗಿರಿನಗರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಬಾಲಕಿಯ  ಮನೆಯ ಪಕ್ಕದ ಮನೆಯಲ್ಲಿ ಕಲಬುರ್ಗಿಯ ಅನಿಲ್‌ ಎಂಬಾತ ವಾಸವಿದ್ದ. ಏ. 21ರಂದು ಆತ ಊರಿಗೆ ಹೋಗಿದ್ದ. ಹೀಗಾಗಿ ಮನೆಗೆ ಬೀಗ ಹಾಕಲಾಗಿತ್ತುಆ ಮನೆಯಿಂದ ನಿನ್ನೆ ರಾತ್ರಿ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು ಬೀಗ ಒಡೆದು ಒಳಗೆ ಹೋಗಿ ಪರಿಶೀಲಿಸಿದ್ದರು. ಆಗ ಕೊಠಡಿಯಲ್ಲಿದ್ದ ಪೆಟ್ಟಿಗೆಯಲ್ಲಿ ಬಾಲಕಿಯ ಶವವಿರುವುದು ಪತ್ತೆಯಾಗಿದೆ.  ಅನಿಲ್‌  ಅತ್ಯಾಚಾರ ಎಸಗಿ ಬಾಲಕಿಯನ್ನು ಕೊಲೆ ಮಾಡಿದ್ದಾನೆ. ಯಾರಿಗೂ ಗೊತ್ತಾಗಬಾರದು ಎಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾನೆ’ ಎಂದು ಪೋಷಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಸದ್ಯ ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಗಿರಿನಗರ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಿಮ್ಸ್​ ಆಸ್ಪತ್ರೆಗ ಸ್ಥಳಾಂತರಿಸಿದ್ದು, ಆರೋಪಿ ಅನಿಲ್​ಗಾಗಿ ಬಲೆ ಬೀಸಿದ್ದಾರೆ.

Follow Us:
Download App:
  • android
  • ios