Asianet Suvarna News Asianet Suvarna News

2017-18 ನೇ ಸಾಲಿನ ಭಾಷಾ ಪ್ರಶಸ್ತಿ ಪ್ರಕಟ; ಕನ್ನಡಿಗರು ಯಾರ್ಯಾರಿದ್ದಾರೆ?

- 2017-18 ನೇ ಸಾಲಿನ  ಬಾದರಾಯಣ ಸಮ್ಮಾನ್ ಸೇರಿದಂತೆ ಹಲವು ಭಾಷಾ ಪ್ರಶಸ್ತಿ ಪ್ರಕಟ

- 6 ಕನ್ನಡಿಗರಿಗೆ ಪ್ರಶಸ್ತಿ ಗರಿ 

- ವಿನಾಯಕ ಉಡುಪ, ಡಾ. ಎಂ ಚಿದಾನಂದ ಮೂರ್ತಿ ಸೇರಿದಂತೆ ನಾಲ್ವರಿಗೆ ಪ್ರಶಸ್ತಿ 

6 Kannadigas got 2017-18 literature award
Author
Bengaluru, First Published Aug 16, 2018, 9:36 AM IST

ನವದೆಹಲಿ (ಆ. 16):  2016, 2017 ಹಾಗೂ 2018 ನೇ ಸಾಲಿನ ಬಾದರಾಯಣ ಸಮ್ಮಾನ್ ಸೇರಿದಂತೆ ಹಲವು ಭಾಷಾ ಪ್ರಶಸ್ತಿಗಳನ್ನು ಹಾಗೂ ಭಾಷೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳ ಗೌರವ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದೆ.

6 ಕನ್ನಡಿಗರು ಈ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇನ್ನು 2018 ನೇ ಸಾಲಿನಲ್ಲಿ ಶೃಂಗೇರಿಯ ವಿನಾಯಕ ಉಡುಪ ಅವರಿಗೆ ರಾಷ್ಟ್ರಪತಿಗಳ ಗೌರವ ಪ್ರಶಸ್ತಿ ಪ್ರಾಪ್ತಿಯಾಗಿದೆ. ಇದೇ ವೇಳೆ, ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಹಿರಿಯ ವಿದ್ವಾಂಸ ಡಾ.ಎಂ.ಚಿದಾನಂದ ಮೂರ್ತಿ ಈ ಗೌರವಕ್ಕೆ ಆಯ್ಕೆಯಾ ಗಿದ್ದಾರೆ.

2017 ನೇ ಸಾಲಿಗೆ ಬೆಂಗಳೂರಿನ ಭುವ ನಗಿರಿ ಅನಂತ ಶರ್ಮ ಅವರಿಗೆ ರಾಷ್ಟ್ರಪತಿಗಳ ಗೌರವ ಪ್ರಶಸ್ತಿ ಲಭಿಸಿದೆ. ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2016 ನೇ ಸಾಲಿನಲ್ಲಿ ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಖ್ಯಾತ ಇತಿಹಾಸ ತಜ್ಞ ಎಸ್. ಶೆಟ್ಟರ್ ಅವರು ರಾಷ್ಟ್ರಪತಿಗಳ ಗೌರವ ಪ್ರಶಸ್ತಿ ಪಡೆದಿದ್ದಾರೆ.

ಇದೇ ಸಾಲಿನ ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಡಾ| ಮಂಜುನಾಥ ಅವರು ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

Follow Us:
Download App:
  • android
  • ios