ಜ್ಯೋತಿಷಿ ಮಾತು ಕೇಳಿ ಊರು ಬಿಟ್ಟವರು ಮತ್ತೆ ಮರಳಿದರು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 4:25 PM IST
50 families desert in N R Pura Came Back To village
Highlights

ಜ್ಯೋತಿಷಿ ಮಾತನ್ನು ನಂಬಿ ಊರು ಬಿಟ್ಟಿದ್ದ ಚಿಕ್ಕಮಗಳೂರಿನ 50ಕ್ಕೂ ಹೆಚ್ಚು ಹಕ್ಕಿ ಜನಾಂಗ ಇದೀಗ ಮತ್ತೆ ಗ್ರಾಮಕ್ಕೆ ಮರಳಿದೆ. 

ಚಿಕ್ಕಮಗಳೂರು :  ಜ್ಯೋತಿಷಿ ಮಾತು ಕೇಳಿ ಗ್ರಾಮಸ್ಥರು ಬಿಟ್ಟ ಪ್ರಕರಣವು ಇದೀಗ ಸುಖಾಂತ್ಯ ಕಂಡಿದೆ. ಜ್ಯೋತಿಷಿ ಮಾತನ್ನು ನಂಬಿ  ಊರು ಬಿಟ್ಟಿದ್ದ 50ಕ್ಕೂ ಅಧಿಕ ಕುಟುಂಬಗಳು ಎನ್.ಆರ್.ಪುರಕ್ಕೆ ಮರಳಿವೆ.  

ತಾಲೂಕು ಆಡಳಿತ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿದ್ದು,  50 ಕುಟುಂಬಗಳನ್ನು ಮನವೊಲಿಸುವಲ್ಲಿ ಶೃಂಗೇರಿ ಶಾಸಕರು ಯಶಸ್ವಿಯಾಗಿದ್ದಾರೆ. ಶೃಂಗೇರಿ ಶಾಸಕ ರಾಜೇಗೌಡ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಗೆಲ್ಲಾ ಬೇರೆ ಕಡೆ ಜಾಗ ನೀಡುವುದಾಗಿ ಭರವಸೆ ನೀಡಿದ್ದಾರೆ. ತಾತ್ಕಲಿಕವಾಗಿ ಎನ್.ಆರ್.ಪುರದಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. 

ರಾತ್ರೋ ರಾತ್ರಿ 50ಕ್ಕೂ ಹೆಚ್ಚು ಹಕ್ಕಿ ಪಿಕ್ಕಿ ಕುಟುಂಬಗಳು ಶಿಗುವಾನಿ ಗ್ರಾಮ ಖಾಲಿ ಮಾಡಿದ್ದರು.   8 ವರ್ಷದಲ್ಲಿ 25 ಜನ ನಿಧನ ಹೊಂದಿದ್ದು, ಗ್ರಾಮದಲ್ಲಿ ತೊಂದರೆ ಇದೆ ಎಂದು ಜ್ಯೋತಿಷಿ ಹೇಳಿದ್ದ ಹಿನ್ನೆಲೆಯಲ್ಲಿ  ಸಾಕು ಪ್ರಾಣಿಗಳನ್ನು ಗ್ರಾಮದಲ್ಲಿಯೇ ಬಿಟ್ಟು ಊರು ಖಾಲಿ ಮಾಡಿದ್ದರು.  ಹಾವು, ಹಕ್ಕಿಪಕ್ಷಿಗಳನ್ನ ಹಿಡಿಯುತ್ತಿದ್ದ ಜನಾಂಗವು ಇದೀಗ ಮತ್ತೆ ಗ್ರಾಮಕ್ಕೆ ಮರಳಿದ್ದಾರೆ. 

loader