45 ವರ್ಷದ ಮಹಿಳೆಯಿಂದ 15 ವರ್ಷದ ಬಾಲಕನ ಮೇಲೆ ಅತ್ಯಾಚಾರ

45 year old woman arrested for allegedly raping a 15 year old boy
Highlights

  • ಒಂದು ತಿಂಗಳಿನಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಮಹಿಳೆ
  • ಫೋಕ್ಸೋ ಕಾಯಿದೆಯಡಿ ಮಹಿಳೆಯ ಬಂಧನ
  •  

ವಿಜಯವಾಡ[ಜೂ.10]:  ಹದಿನೈದು ವರ್ಷದ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ 45 ವರ್ಷದ ಮಹಿಳೆಯೊಬ್ಬಳನ್ನು ಫೊಕ್ಸೋ ಕಾಯದೆಯಡಿ ಬಂಧಿಸಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಬಂಧಿತ ಮಹಿಳೆ ಕಳೆದ ಒಂದು ತಿಂಗಳಿನಿಂದ  ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು ಬಾಲಕನ ತಾಯಿ ನೀಡಿದ ದೂರಿನ ಮೇಲೆ  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಿಳೆಯು ಬಾಲಕನ ಮನೆಯ ಬಳಿಯೇ ವಾಸಿಸುತ್ತಿದ್ದು ಕಳೆದ ತಿಂಗಳು ಮೇ 5 ರಿಂದ ಹುಡುಗನ ಮೇಲೆ ಬಲವಂತವಾಗಿ ಅತ್ಯಾಚಾರವೆಸಗುತ್ತಾ ಬಂದಿದ್ದಾಳೆ. ಜೂನ್ 7 ರಂದು ಲೈಂಗಿಕ ದೌರ್ಜನ್ಯ ನಡೆಸುತ್ತಿರುವಾಗ ಹುಡುಗನ  ತಾಯಿಗೆ ನೇರವಾಗಿ ಸಿಕ್ಕಿಬಿದ್ದಿದ್ದಾಳೆ.

ತಕ್ಷಣ ಬಾಲಕನ ತಾಯಿ ತನ್ನ ಮಗನ ಮೇಲೆ ಹಲ್ಲೆ ನಡೆಸಲು ಶುರು ಮಾಡಿದಾಗ ಬಲವಂತದ ಲೈಂಗಿಕ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಮಹಿಳೆಯನ್ನು ಫೋಕ್ಸೋ ಕಾಯಿದೆಯಡಿ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

loader