ಪಾಟ್ನಾ(ಮೇ29)   ಈತ ಸಾಮಾನ್ಯ ವ್ಯಕ್ತಿ ಎಂತೂ ಅಲ್ಲವೇ ಅಲ್ಲ. ಬಿಹಾರದ ಬಕ್ಸರ್  ಕ್ವಾರಂಟೈನ್ ಸೆಂಟರ್ ನಲ್ಲಿ ಇರುವ ವ್ಯಕ್ತಿ ಬೆಳಿಗ್ಗೆ ಬರೋಬ್ಬರಿ 40 ರೋಟಿ ಮಧ್ಯಾಹ್ನ  10 ಪ್ಲೇಟ್ ಅನ್ನ ತಿನ್ನುತ್ತಾನೆ!

ಸಾವಿರಾರು ವಲಸೆ ಕಾರ್ಮಿಕರು ತವರಿಗೆ ಆಗಮಿಸುತ್ತಿದ್ದು ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರವೊಂದನ್ನು ಮಾಡಲಾಗಿದೆ. ಹದಿನಾಲ್ಕು ದಿನ ಕಾರ್ಮಿಕರಿಗೆ ಕ್ವಾರಂಟೈನ್ ಮಾಡಿದ್ದು ಕೊರೋನಾ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ.

ಜೇನು ತುಪ್ಪದ ಸವಿ ಗೊತ್ತು, ಜೇನು ನೋಣವೂ ಇಷ್ಟು ಉಪಕಾರಿಯೇ!

ಕೇಂದ್ರದಲ್ಲಿ ಕ್ವಾರಂಟೈನ್ ಆಗಿರುವ ಇಪ್ಪತ್ಮೂರು ವರ್ಷದ ವ್ಯಕ್ತಿ ಎಲ್ಲರ ಅಚ್ಚರಿಕೆ ಕಾರಣವಾಗಿದ್ದಾನೆ.  ಅನುಪ್ ಓಜಾ ಬೆಳಗಿನ ತಿಂಡಿಗೆ 40 ಚಪಾತಿ ಮತ್ತು ಮಧ್ಯಾಹ್ನದ ಊಟಕ್ಕೆ 10 ಪ್ಲೇಟ್ ಅನ್ನ ಬೇಕಾಗಿದೆ.  ಅಲ್ಲದೇ ಈತ ಲಿಟಿಸ್ ಸಹ ತಿನ್ನುತ್ತಾನಂತೆ.  ಖರ್ನಾ ತಾಂಡ್ ಪಂಚಾಯತ ವ್ಯಕ್ತಿ ಈ ಅನುಪ್. ಹಿಂದೊಮ್ಮೆ 83 ಲಿಟ್ಟಿಸ್ ತಿಂದು ದಾಖಲೆ ಮಾಡಿದ್ದನಂತೆ ಪುಣ್ಯಾತ್ಮ.

ಈ ಸುದ್ದಿ ಹೊರಬರುತ್ತಲೇ ಅಧಿಕಾರಿಗಳು ಪರಿಶೀಲನೆಗೆ ಎಂದು ಕ್ವಾರಂಟೈನ್ ಸೆಂಟರ್ ಗೆ ತೆರಳಿದ್ದಾರೆ.  ಓಜಾ ತನ್ನ ಬಾಲ್ಯಾವಸ್ಥೆಯಲ್ಲೇ ರಾಜಸ್ಥಾನಕ್ಕೆ ತೆರಳಿದ್ದ. ನಾಲ್ಕನೇ ಹಂತದ ಲಾಕ್ ಡೌನ್ ಘೋಷಣೆಯಾದಾಗ ತಾಳ್ಮೆ ಕಳೆದುಕೊಂಡು ತವರಿಗೆ ಆಗಮಿಸಿದ್ದ. ಗುರುವಾರಕ್ಕೆ ಆತನ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದ್ದು ಮನೆಗೆ ಕಳಿಸಿಕೊಡಲಾಗಿದೆ.

ಹಾವಾರ್ಡ್ ಮೆಡಿಕಲ್ ಜರ್ನಲ್ ಎರಡು ವರ್ಷದ ಹಿಂದೆ ಪ್ರಕಟ ಮಾಡಿದ್ದ ವರದಿಯೊಂದರಲ್ಲಿ ಒತ್ತಡ ಸಹ ಹಸಿವನ್ನು ಜಾಸ್ತಿ ಮಾಡುತ್ತದೆ ಎಂದು ಹೇಳಿತ್ತು.