4 ತಿಂಗಳ ಹಸುಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ

4 month baby raped and murdered in Indore
Highlights

ಉನ್ನಾವೋ ಕಠುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಮಾಸುವ ಮುನ್ನವೇ  ಇಂದೋರ್’ನಲ್ಲಿ ಇಂತಹದ್ದೇ ಆದ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ.

ಇಂದೋರ್ : ಉನ್ನಾವೋ ಕಠುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಮಾಸುವ ಮುನ್ನವೇ  ಇಂದೋರ್’ನಲ್ಲಿ ಇಂತಹದ್ದೇ ಆದ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ.

4 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಘಟನೆ  ನಡೆದಿದೆ. ಇಲ್ಲಿನ ಶಿವ ವಿಲಾಸ್ ಪ್ಯಾಲೇಸ್ ಬಳಿಯಲ್ಲಿ ಬಳಿ ಮಗುವಿನ ರಕ್ತಸಿಕ್ತವಾದ ಮೃತದೇಹ ಪತ್ತೆಯಾಗಿದೆ.

ಮಗುವನ್ನು ಮಧ್ಯರಾತ್ರಿ ವೇಳೆ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆಗೈಯ್ಯಲಾಗಿದೆ. ಪೊಲೀಸರು  ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ.  

ಮೃತ ಮಗುವಿನ ತಂದೆ  ಇಲ್ಲಿ ಬಲೂನ್ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇಲ್ಲಿನ ಹೊರಾಂಗಣ ಪ್ರದೇಶದಲ್ಲಿ ಪೋಷಕರೊಂದಿಗೆ ಮಗು ನಿದ್ರಿಸುತ್ತಿದ್ದ ವೇಳೆ  ಸೈಕಲ್’ನಲ್ಲಿ ಬಂದ ವ್ಯಕ್ತಿಯೋರ್ವ ಮಗುವನ್ನು ಎತ್ತಿಕೊಂಡು ಹೋಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆಯಾಗಿದೆ.

loader