Asianet Suvarna News Asianet Suvarna News

ಮಹಿಳೆಯೊಬ್ಬಳ ಮೇಲೆ ನಾಲ್ವರು ಸೇನಾ ಸಿಬ್ಬಂದಿಯಿಂದ ನಿರಂತರ ಅತ್ಯಾಚಾರ

ಸಂತ್ರಸ್ತೆಗೆ ಮಾತು ಬಾರದೆ, ಕಿವಿ ಕೇಳದ ಕಾರಣ ಇದನ್ನೇ ಬಂಡವಾಳ ಮಾಡಿಕೊಂಡ ಶಂಕಿತ ಸೇನಾ ಸಿಬ್ಬಂದಿ ವಿಡಿಯೋ ತೋರಿಸಿ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯ ಜಿಲ್ಲಾ ಮುಖ್ಯಸ್ಥರಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿ ತಿಳಿಸಿದ್ದಾರೆ.

4 Army personnel booked for molesting speech-impaired woman
Author
Bengaluru, First Published Oct 17, 2018, 4:04 PM IST

ಪುಣೆ[ಅ.17]: ನಾಲ್ವರು ಸೇನಾ ಸಿಬ್ಬಂದಿ ಶ್ರವಣ ಮಾಂದ್ಯ ಮಹಿಳೆಯೊಬ್ಬಳ ಮೇಲೆ ನಿರಂತರ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಅತ್ಯಾಚಾರಕ್ಕೊಳಗಾದ ಮಹಿಳೆ ಸರ್ಕಾರೇತರ ಸಂಸ್ಥೆಯೊಂದರ ಮೂಲಕ ಸಹಾಯ ಪಡೆದು ಪೊಲೀಸರಿಗೆ ದೂರು ನೀಡಿದ್ದಾಳೆ. 2015ರ ಜೂನ್'ನಲ್ಲಿ ಸಂತ್ರಸ್ತ
ಮಹಿಳೆ ಪುಣೆಯ ಖಾಡ್ಕಿ ಮಿಲಿಟರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ  ನಾಲ್ವರು ಸೇನಾ ಸಿಬ್ಬಂದಿ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ಆರಂಭದಲ್ಲಿ ಈಕೆ ರಾತ್ರಿ ಪಾಳಿ ಕೆಲಸ ನಿರ್ವಹಿಸುತ್ತಿದ್ದಾಗ  ಸಿಪಾಯಿಯೊಬ್ಬ ಮೊದಲು ಅತ್ಯಾಚಾರ ನಡೆಸಿದ್ದಾನೆ. ನಂತರದ ದಿನಗಳಲ್ಲಿ ಮೂವರು ಸೇನಾ ಸಿಬ್ಬಂದಿಗಳು ಸೇರಿಕೊಂಡು ವಿಡಿಯೋ ಕ್ಲಿಪ್ ಮಾಡಿಕೊಂಡಿದ್ದಾರೆ.

ಸಂತ್ರಸ್ತೆಗೆ ಮಾತು ಬಾರದೆ, ಕಿವಿ ಕೇಳದ ಕಾರಣ ಇದನ್ನೇ ಬಂಡವಾಳ ಮಾಡಿಕೊಂಡ ಶಂಕಿತ ಸೇನಾ ಸಿಬ್ಬಂದಿ ವಿಡಿಯೋ ತೋರಿಸಿ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯ ಜಿಲ್ಲಾ ಮುಖ್ಯಸ್ಥರಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. 

ಕೇಂದ್ರ ರಕ್ಷಣ ಸಚಿವರು ಹಾಗೂ ಸೇನಾ ಮುಖ್ಯಸ್ಥರಿಗೆ ಸಂತ್ರಸ್ತೆ ಪತ್ರ ಬರೆದಿದ್ದು ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿದ್ದಾಳೆ. ಇತ್ತೀಚಿಗೆ ಕೇಂದ್ರ ಸಚಿವ ಎಂ.ಜೆ.ಅಕ್ಬರ್, ಬಾಲಿವುಡ್ ನಟ ನಾನಾ ಪಟೇಕರ್ ಸೇರಿದಂತೆ ಹಲವು ಗಣ್ಯರ ವಿರುದ್ಧ ಮೀಟೂ ಅಭಿಯಾನದ ಮೂಲಕ ಲೈಂಗಿಕ ಆರೋಪದ ಕಿರುಕುಳ ಪ್ರಕರಣಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಮಹಿಳೆಯು ಸೇನಾ ಸಿಬ್ಬಂದಿಯ ವಿರುದ್ಧ ದೂರು ದಾಖಲಿದ್ದಾಳೆ.

 

Follow Us:
Download App:
  • android
  • ios