Asianet Suvarna News Asianet Suvarna News

ಅಭ್ಯಾಸ ನಡೆಸಲು ಭಾರತಕ್ಕೆ ಬಂದಿವೆ 3 ರಫೇಲ್

ಮಧ್ಯಪ್ರದೇಶದ ಗ್ವಾಲಿಯರ್ ಹಾಗೂ ಉತ್ತರಪ್ರದೇಶದ ಆಗ್ರಾ ವಾಯುನೆಲೆಯಲ್ಲಿ 3 ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆ ಜತೆ ಅಭ್ಯಾಸದಲ್ಲಿ ನಿರತವಾಗಿವೆ.

3 France Fighter Rafale Aircraft Arrived at Gwalior Airbase
Author
New Delhi, First Published Sep 4, 2018, 1:44 PM IST

ನವದೆಹಲಿ[ಸೆ.04]: ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿರುವಾಗಲೇ, ಫ್ರಾನ್ಸ್‌ನ ಆ ವಿಮಾನಗಳು ಸದ್ದಿಲ್ಲದೇ ದೇಶದಲ್ಲಿ ಅಭ್ಯಾಸದಲ್ಲಿ ನಿರತವಾಗಿವೆ. 

ಮಧ್ಯಪ್ರದೇಶದ ಗ್ವಾಲಿಯರ್ ಹಾಗೂ ಉತ್ತರಪ್ರದೇಶದ ಆಗ್ರಾ ವಾಯುನೆಲೆಯಲ್ಲಿ 3 ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆ ಜತೆ ಅಭ್ಯಾಸದಲ್ಲಿ ನಿರತವಾಗಿವೆ. ಆಸ್ಟ್ರೇಲಿಯಾದಲ್ಲಿ ಸಮರಾಭ್ಯಾಸ ನಡೆಸಿದ ಬಳಿಕ ಫ್ರಾನ್ಸ್’ಗೆ ಮರಳುತ್ತಿದ್ದ ಈ ವಿಮಾನಗಳನ್ನು ಭಾರತೀಯ ವಾಯುನೆಲೆಗಳಿಗೆ ತಂದು ಅಭ್ಯಾಸ ನಡೆಸಲಾಗುತ್ತಿದೆ. 

ಮೂರು ದಿನಗಳ ಕಾಲ ಈ ವಿಮಾನಗಳು ಇಲ್ಲೇ ಇರಲಿವೆ. ಸದ್ಯ ಈ ವಿಮಾನ ಚಾಲನೆ ಅವಕಾಶ ಭಾರತೀಯ ಪೈಲಟ್‌ಗಳಿಗೆ ಲಭಿಸುವುದಿಲ್ಲ. ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಮುಂದಿನ ವರ್ಷ ಮಧ್ಯಭಾಗದಲ್ಲಿ ದೊರೆಯಲಿದೆ.

Follow Us:
Download App:
  • android
  • ios