ಕುಂದಾಪುರ: ಅಪ್ರಾಪ್ತ ಶಾಲಾ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಉಡುಪಿ ಜಿಲ್ಲೆಯ ಸ್ಥಳೀಯ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ ವಿರುದ್ಧ ಪೋಕ್ಸೊ ಕಾಯಿದೆಯಡಿ ಇದೀಗ 21 ದೂರುಗಳು ಪ್ರತ್ಯೇಕ ಠಾಣೆಗಳಲ್ಲಿ ದಾಖಲಾಗಿವೆ. 

ಭಾನುವಾರ ಗಂಗೊಳ್ಳಿ ಠಾಣೆಯಲ್ಲಿ ಎರಡು ಹಾಗೂ ಕೊಲ್ಲೂರು ಠಾಣೆಯಲ್ಲಿ ಒಂದು ದೂರು ದಾಖಲಾಗಿದ್ದು, ಬೈಂದೂರು ಠಾಣೆಯಲ್ಲಿ ಹದಿನಾರು, ಕೊಲ್ಲೂರು ಠಾಣೆಯಲ್ಲಿ ಒಂದು, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈವರೆಗೆ ಒಟ್ಟು 21 ಪ್ರಕರಣ ದಾಖಲಾಗಿವೆ. 

ನ್ಯಾಯಾಲಯ ಆರೋಪಿಯನ್ನು ಮೂರು ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ ಅವಧಿ ಮುಗಿಯುತ್ತಿದ್ದು, ಸೋಮವಾರ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.