Asianet Suvarna News Asianet Suvarna News

ಇಂದಿನಿಂದ ರಾಜೀನಾಮೆ ಪರ್ವ ಶುರು : 20 ಶಾಸಕರಿಂದ ಗುಡ್ ಬೈ?

ಇಂದಿನಿಂದ ಕರ್ನಾಟಕ ಸರ್ಕಾರದಲ್ಲಿ ರಾಜೀನಾಮೆ ಪರ್ವ ಆರಂಭವಾಗಲಿದೆ. 20 ಶಾಸಕರು ತಮ್ಮ ರಾಜೀನಾಮೆ ನೀಡಲಿದ್ದಾರೆ ಎಂದ್ು ಬಿಜೆಪಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. 

20 MLAs Will Quit Congress Says BJP Leaders
Author
Bengaluru, First Published Sep 18, 2018, 7:40 AM IST

ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನದ ಗುರಿಯೊಂದಿಗೆ ಉಭಯ ಪಕ್ಷಗಳ ಶಾಸಕರ ರಾಜೀನಾಮೆ ಪರ್ವ ಮಂಗಳ ವಾರದಿಂದಲೇ ಆರಂಭವಾಗುವ ನಿರೀಕ್ಷೆಯಿದೆ. ಎರಡು ದಿನಗಳಲ್ಲಿ ಸರ್ಕಾರದ ಪಾಲುದಾರ ಪಕ್ಷಗಳ ಅತೃಪ್ತ ಶಾಸಕರು ಒಬ್ಬೊಬ್ಬರಾಗಿ ರಾಜೀನಾಮೆ ನೀಡುವ ಮೂಲಕ ಹೊರಬರಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ಅಚಲ ವಿಶ್ವಾಸ ವ್ಯಕ್ತಪಡಿಸಿವೆ.

ಇದನ್ನು ಆಪರೇಷನ್ ಕಮಲ ಎಂದು ಕರೆಯುವುದನ್ನು ಒಪ್ಪದ ಬಿಜೆಪಿ ನಾಯಕರು, ಸಮ್ಮಿಶ್ರ ಸರ್ಕಾರದ ಆಡಳಿತ ವೈಫಲ್ಯದಿಂದ ಶಾಸಕರೇ ಬೇಸತ್ತು ರಾಜೀನಾಮೆ ನೀಡಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ.  ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ವಾದ ಮಂಡಿಸುತ್ತಿದ್ದಾರೆ. ಆದರೆ, ರಾಜೀನಾಮೆ ನೀಡುವುದಾದರೆ ಎಷ್ಟು ಮಂದಿ? ಯಾರ್ಯಾರು? ಕಾಂಗ್ರೆಸ್‌ನವರು ಎಷ್ಟು? ಜೆಡಿಎಸ್‌ನವರು ಎಷ್ಟು ಎಂಬುದು ಮಾತ್ರ ಇನ್ನೂ ಅಸ್ಪಷ್ಟವಾಗಿದೆ. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಅವರ ಬೆಂಬಲಿಗ ಶಾಸಕರು ರಾಜೀನಾಮೆ ನೀಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ. ಈ ಬಗ್ಗೆ ಮಂಗಳವಾರವೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಸುಮಾರು 18 ರಿಂದ 20  ಶಾಸಕರು ರಾಜೀನಾಮೆ ನೀಡಲು ಬಯಸಿದ್ದಾರೆ. ಈ ಪೈಕಿ ಕಾಂಗ್ರೆಸ್‌ನವರ ಸಂಖ್ಯೆಯೇ ಹೆಚ್ಚು. ಜೆಡಿಎಸ್ ನಿಂದ ಹೊರಬರಲು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂಬ ಮಾಹಿತಿ ಬಿಜೆಪಿಯಿಂದ ಹೊರಬಿದ್ದಿದೆ. ಒಟ್ಟಿನಲ್ಲಿ ಒಬ್ಬ ಶಾಸಕರು ರಾಜೀನಾಮೆ ಪ್ರಕಟಿಸಿದ ನಂತರ ಅದನ್ನು ಉಳಿದ ಅತೃಪ್ತ ಶಾಸಕರು ಅನುಸರಿಸಲಿದ್ದಾರೆ. ಅದಕ್ಕೆ ಪೂರ್ವ ತಯಾರಿ ನಡೆದಿದೆ. ಆರಂಭವಾಗುವುದು ಬೇಕಾಗಿದೆ. ಅದು ಮಂಗಳವಾರವೇ ಆಗಬಹುದು. ತಪ್ಪಿದರೆ ಬುಧವಾರ ಖಚಿತ ಎಂಬ ವಿಶ್ವಾಸದ ಮಾತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತ ಶಾಸಕರಿಂದ ಹೊರಬೀಳುತ್ತಿದೆ.

ಈ ನಡುವೆ ಸೋಮವಾರ ದಿನವಿಡೀ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಅತೃಪ್ತ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೂ ಈ ಪ್ರಯತ್ನ ಇದು ಫಲ ಕೊಡುವುದಿಲ್ಲ. ಅತೃಪ್ತ ಶಾಸಕರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದರು. 

ಒಟ್ಟಿನಲ್ಲಿ ರಾಜ್ಯ ರಾಜಕಾರಣದ ಕಾವು ಏರಿದ್ದು, ಮಂಗಳವಾರದಿಂದ  ಮತ್ತಷ್ಟು ಇದು ಮತ್ತೊಂದು ಹಂತಕ್ಕೆ ಹೋಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Follow Us:
Download App:
  • android
  • ios