Asianet Suvarna News Asianet Suvarna News

ಅಬ್ಬಾ..! ಕಾಮದ ತೀಟೆ ತೀರಿಸಿಕೊಳ್ಳಲು ಕಾಮಾಂಧರು ಹೀಗೆಲ್ಲಾ ಮಾಡ್ತಾರಾ?

 ಕಾಮಾಂಧರು ತಮ್ಮ ಕಾಮದ ತೀಟೆ ತೀರಿಸಿಕೊಳ್ಳಲು ನಾನಾ ವೇಷಗಳನ್ನ ಹಾಕ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.  

2 Posing As Cops Sexually Assault Woman And Niece In Delhi
Author
Bengaluru, First Published Oct 30, 2018, 9:14 PM IST
  • Facebook
  • Twitter
  • Whatsapp

ನವದೆಹಲಿ, [ಅ.30]: ತಮ್ಮ ಕಾಮದ ತೀಟೆ ತೀರಿಸಿಕೊಳ್ಳಲು ಇಬ್ಬರು ಕಾಮುಕರು ಪೊಲೀಸ್ ಸೋಗಿನಲ್ಲಿ ಹೋಗಿ ಯುವತಿಯರ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.

ಭಾನುವಾರ ರಾತ್ರಿ ದೆಹಲಿಯ ಕನ್ಜಾವಾಲ ಭಾಗದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವತಿ ಹಾಗೂ ಸಂಬಂಧಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಸೋಗಿನಲ್ಲಿದ್ದ ಆರೋಪಿಗಳ ಪತ್ತೆಗೆ ದೆಹಲಿ ಪೊಲೀಸರು ಬಲೆ ಬೀಸಿದ್ದಾರೆ.

ದೂರಿನಲ್ಲಿ ಯುವತಿ, ಭಾನುವಾರ ರಾತ್ರಿ ಸಂಬಂಧಿಯೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ಯುವಕರು ಪೊಲೀಸ್ ವೇಷದಲ್ಲಿ ಬಂದು ನನ್ನೊಂದಿಗೆ ಮಾತನಾಡಲು ಶುರು ಮಾಡಿದರು‌. ಬಳಿಕ ಅತ್ಯಾಚಾರ ಎಸಗಿದರು‌.

 ಈ ವೇಳೆ ನನ್ನೊಂದಿಗಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು 20 ವರ್ಷದ ಸಂತ್ರಸ್ತೆ ಹೇಳಿದ್ದಾಳೆ. ಪ್ರಕರಣ ಸಂಬಂಧ ಸಂತ್ರಸ್ತೆಯ ಆರೋಗ್ಯ ತಪಾಸಣೆ ನಡೆಸಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಲಾಗಿದೆ‌. 

Follow Us:
Download App:
  • android
  • ios