Asianet Suvarna News Asianet Suvarna News

ಹೊಸ ವರ್ಷದ ಬೆನ್ನಲ್ಲೇ ಭೀಕರ ಅಪಘಾತ

ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

2 Killed 3 Injured in Road Accident In Dharwad
Author
Bengaluru, First Published Jan 1, 2019, 9:48 AM IST
  • Facebook
  • Twitter
  • Whatsapp

ಧಾರವಾಡ : ಹೊಸ ವರ್ಷಾಚರಣೆಯ ಬೆನ್ನಲ್ಲೇ ಕಾರು ಮತ್ತು ಲಾರಿ ಮಧ್ಯೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ  ಘಟನೆ ಸಂಭವಿಸಿದೆ. ಮೃತರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದವರೆನ್ನಲಾಗಿದೆ. 

ಮೃತರನ್ನು ಮಂಜು(40), ದರ್ಶನ್(28) ಎಂದು ಗುರುತಿಸಲಾಗಿದೆ.  ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಪಘಾತವಾಗಿದೆ.

Follow Us:
Download App:
  • android
  • ios