ಶ್ರೀನಗರ, [ಫೆ.22]: ಜಮ್ಮುಕಾಶ್ಮೀರದ ಸೊಪೊರೆಯಲ್ಲಿ  [ಶುಕ್ರವಾರ] ನಡೆದ ಎನ್​​ಕೌಂಟರ್​​ನಲ್ಲಿ ಮತ್ತಿಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. 

ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ 40ಕ್ಕೂ ಹೆಚ್ಚು ಯೋಧರನ್ನು ಹತ್ಯೆ ಮಾಡಿದ ಉಗ್ರರ ಹುಟ್ಟಡಗಿಸಲು ಪಣ ತೊಟ್ಟಿರುವ ಭಾರತೀಯ ಸೇನೆ ಗಡಿಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಪೊಲೀಸರು ಸೊಪೊರೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಸ್ಪಷ್ಟಪರಿಸಿದ್ದಾರೆ.

ಗನ್‌ ಹಿಡಿದರೆ ಕೊಲ್ಲುತ್ತೇವೆ: ಸೇನಾಪಡೆ

ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿ ಇಬ್ಬರು ಜೈಷ್ ಇ ಮೊಹಮ್ಮದ್ ಉಗ್ರರನ್ನು ಬಂಧಿಸಲಾಗಿದೆ. ಜೈಷ್ ಇ ಮೊಹಮ್ಮದ್ ನ ಶಹನ್ವಾಜ್ ಅಹ್ಮದ್ ಮತ್ತು ಅಖಿಬ್ ಅಹ್ಮದ್ ಮಲೀಕ್ ಎಂದು ತಿಳಿದುಬಂದಿದೆ. 

 ಶಹನ್ವಾಜ್ ಕುಲ್ಗಾಂನವನಾದರೆ, ಮಲೀಕ್ ಪುಲ್ವಾಮಾದವನು ಎಂದು ಗುರುತಿಸಲಾಗಿದೆ. ಇಬ್ಬರೂ ಜೈಶ್ ಇ ಮೊಹಮ್ಮದ್ ಸಂಘಟನೆಗೆ ಸೇರಿದವರೆಂಬುದು ಸಾಬೀತಾಗಿದೆ.