ಮುಜಾಫರ್‌ನಗರ, [ಡಿ.14]: 18 ವರ್ಷದ ನೀಚ ಯುವಕನೊಬ್ಬ ತನ್ನ 85 ವರ್ಷದ ಅಜ್ಜಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದ ಬುಧನಾ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ 85 ವರ್ಷದ ಅಜ್ಜಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ್ದ. ಬಳಿಕ ಕುಟುಂಬದವರೆಲ್ಲರೂ ಮನೆಗೆ ಬಂದ ಬಳಿಕ ವಿಚಾರ ತಿಳಿದಿದ್ದು, ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಜ್ಜಿಯ ಮಾಹಿತಿ ಮೇರೆಗೆ ನಾಪತ್ತೆಯಾಗಿದ್ದ ಆರೋಪಿಗಾಗಿ ಬಲೆ ಬೀಸಿ, ಕೊನೆಗೆ ಕಾಮುಕ ಮೊಮ್ಮಗನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೃದ್ಧೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ, ಯುವಕನ ವಿರುದ್ಧ ಐಪಿಸಿ ಸೆಕ್ಷನ್ 376 ಅಡಿ ಪ್ರಕರಣ ದಾಖಲಾಗಿದ್ದು, ಯುವಕ ಮತ್ತು ವೃದ್ಧೆ ಒಂದೇ ಕುಟುಂಬದವರಾಗಿದ್ದು ಆಕೆ ಆತನಿಗೆ ಸಂಬಂಧದಲ್ಲಿ ಅಜ್ಜಿ ಆಗುತ್ತಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.