ಸಹೋದರನಿಂದ 16 ವರ್ಷದ ತಂಗಿ ಮೇಲೆ ಅತ್ಯಾಚಾರ

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 1, Aug 2018, 6:01 PM IST
16-year-old delivers baby, brother booked for rape
Highlights

ದೇಶದಲ್ಲೀಗ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿದೆ  ಅನ್ನೋದು ಮತ್ತೆ ಮತ್ತೆ ಸಾಬೀತಾಗಿದೆ. ಕಾಮತೃಷೆಗಾಗಿ ತಂಗಿಯನ್ನೇ ಬಳಸಿಕೊಂಡ ಅಣ್ಣ ಇದೀಗ ಪೊಲೀಸರು ಅತಿಥಿಯಾಗಿದ್ದಾನೆ.

ಮೊಹಾಲಿ(ಆ.01):  16 ವರ್ಷದ ಬಾಲಕಿ ಮೇಲೆ ಸಹೋದರನೇ ಅತ್ಯಾಚಾರ ಮಾಡಿದ ಅಮಾನವೀಯ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಹೋದರರನ್ನ ಅರೆಸ್ಟ್ ಮಾಡಿದ್ದಾರೆ.

17 ವರ್ಷದ ಅಣ್ಣನಿಂದಲೇ ಕಳೆದೊಂದು ವರ್ಷದಿಂದ  ನಿರಂತರ ಅತ್ಯಾಚಾರಕ್ಕೊಳಗಾದ ಬಾಲಕಿ  ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಯಿಂದ ಪೋಷಕರು , ಬಾಲಕಿ ಹಾಗೂ ಮಗುವನ್ನ ಮನೆಯಿಂದ ಹೊರಗೆ ಹಾಕಿದರು. ವಿಷಯ ತಿಳಿದ ಗ್ರಾಮಸ್ಥರು ಪೊಲೀಸರು ಮಾಹಿತಿ ನೀಡಿದ್ದರು.

ಮೊಹಾಲಿ ಪೊಲೀಸರು ವಿಚಾರಣೆ ನಡೆಸಿದಾಗ ಸಹೋದರ ಕೃತ್ಯವನ್ನ ಬಾಯ್ಬಿಬಿಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿ ಸಹೋದರರನ್ನ ಬಂಧಿಸಿದ್ದಾರೆ. ಸದ್ಯ ಬಾಲಕಿ ಹಾಗೂ ಮಗುವನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

loader