ರೆಪಿಸ್ಟ್ ಹೆಂಡತಿ ಕಂಡ ದೃಶ್ಯ ಬಿಚ್ಚಿಟ್ಟ ಹೀನ ಸತ್ಯ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 8:53 PM IST
13-Year-Old Mentally Challenged Girl Brutally Raped By Ten People For 2 Months
Highlights

ಮಹಿಳೆ ಮತ್ತು ಬಾಲಕಿಯರ ಮೇಲಿನ ದೌರ್ಜನ್ಯದ ಪ್ರಕರಣಗಳಿಗೆ ಕೊನೆಯೇ ಇಲ್ಲ. ಮೇಘಾಲಯದಿಂದ ಬಂದಿರುವ ಈ ಸುದ್ದಿ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.

ಮೇಘಾಲಯ[ಜು.30] 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಉತ್ತರ ಮೇಘಾಲಯದ ಹಾರೋ ಹಿಲ್ಸ್ ಜಿಲ್ಲೆಯಲ್ಲಿ ಅಮಾನವೀಯ ದುರಂತ ನಡೆದಿದೆ.

ಬಾಲಕಿಯ ಕುಟುಂಬದವರು ದೂರು ನೀಡಿದ ಆಧಾರದ ಮೇಲೆ  9 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮಾನಸಿಕ ಅಸ್ವಸ್ಥೆಯಾಗಿರುವ ಬಾಲಕಿ ಮೇಲೆ ಎರಡು ತಿಂಗಳಿನಿಂದ ಅತ್ಯಾಚಾರ ನಡೆದಿದೆ.  ಅತ್ಯಾಚಾರ ನಡೆಯುತ್ತಿದ್ದುದನ್ನು ಆರೋಪಿಗಳ ಪೈಕಿ ಒಬ್ಬನ ಹೆಂಡತಿ ನೋಡಿದ್ದಾಳೆ. ಕೂಡಲೇ ವಿಚಾರವನ್ನು ಸ್ಥಳೀಯರ ಗಮನಕ್ಕೆ ತಂದಿದ್ದಾಳೆ. ಮೊದಲು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳೋಣ ಎಂದಿದ್ದಾರೆ. ಆದರೆ ಬಾಲಕಿ ಕುಟುಂಬದವರು ಒಪ್ಪದೇ ದೂರು ದಾಖಲಿಸಿದ್ದಾರೆ.

8 ಮಂದಿ ಸಾಮೂಹಿಕ ಅತ್ಯಾಚಾರ : ಗರ್ಭಿಣಿ ಮೇಕೆ ಸಾವು

9 ಜನರಲ್ಲಿ ಇಬ್ಬರು ಅಪ್ರಾಪ್ತರಿದ್ದರೆ ಬಹುತೇಕರಿಗೆ ಮದುವೆಯಾಗಿದೆ. ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ನುಣುಚಿಕೊಳ್ಳಲು ಬಿಡುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರ ಜಿ ಸಿ ಮಾರಖ್  ಎಚ್ಚರಿಸಿದ್ದಾರೆ.

loader