ಡೆಹ್ರಾಡೂನ್[ಜೂ.22]: 4 ವರ್ಷದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಪ್ರಕರಣದ ಆರೋಪಿ ಕೇವಲ 11 ವರ್ಷದ ಅಪ್ರಾಪ್ತ ಬಾಲಕ ಎನ್ನುವ ವಿಚಾರವೇ ಆತಂಕ ಮೂಡಿಸುವಂತಿದೆ. 

ಡೆಹ್ರಾಡೂನ್ ನ ದಲಾನಾವಾಲಾ ಕ್ಷೇತ್ರದಲ್ಲಿ ಇಂತಹುದ್ದೊಂದು ಬೆಚ್ಚಿ ಬೀಳುವ ಪ್ರಕರಣ ನಡೆದಿದೆ. ಪ್ರಕರಣದ ಕುರಿತಾಗಿ ಪ್ರತಿಕ್ರಿಯಿಸಿರುವ ಅಧಿಕಾರಿಗಳು 'ಬುಧವಾರದಂದು ಮಗುವಿನ ತಂದೆ-ತಾಯಿ ಇಬ್ಬರೂ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮಗು ತನ್ನ ಇಬ್ಬರು ಸಹೋದರರೊಂದಿಗೆ ಮನೆಯಲ್ಲಿದ್ದಳು' ಎಂದಿದ್ದಾರೆ.

ಪ್ರಕರಣದ ಕುರಿತಾಗಿ ಮತ್ತಷ್ಟು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಶ್ವೇತಾ ಚೌಬೆ 'ಮಗುವಿನ ತಂದೆ ತಾಯಿ ಗುರುವಾರ ಈ ಬಗ್ಗೆ ದೂರು ನೀಡಿದ್ದು, ಈ ವೇಳೆ ನೆರೆ ಮನೆಯ ಬಾಲಕ[ಆರೋಪಿ] ಸಂತ್ರಸ್ತ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ' ಎಂದಿದ್ದಾರೆ.

ಆರೋಪಿ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗಿದ್ದು, ಮಕ್ಕಳ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.