Asianet Suvarna News Asianet Suvarna News

11ನೇ ಬಾರಿ ಗರ್ಭ ಧರಿಸದಂತೆ ಸಲಹೆ ನೀಡಿದ್ದಕ್ಕೆ ಗರ್ಭಿಣಿ ಪರಾರಿ

10ನೇ ಮಗುವಿಗೆ ತಾಯಿಯಾಗುತ್ತಿರುವ ಮಹಿಳೆಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ 11ನೇ ಗರ್ಭ ಧರಿಸದಂತೆ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಕ್ಕೆ, ಆ ಮಹಿಳೆ ಆಸ್ಪತ್ರೆಯಿಂದಲೇ ಕಾಣೆಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 

10th Time Pregnant Woman Escaped Frome Hospital
Author
Bengaluru, First Published Aug 14, 2018, 9:34 AM IST

ಚೆನ್ನೈ: 10ನೇ ಮಗುವಿಗೆ ತಾಯಿಯಾಗುತ್ತಿರುವ ಮಹಿಳೆಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ 11ನೇ ಗರ್ಭ ಧರಿಸದಂತೆ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಕ್ಕೆ, ಆ ಮಹಿಳೆ ಆಸ್ಪತ್ರೆಯಿಂದಲೇ ಕಾಣೆಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 

ಅಲೆಮಾರಿ ಜನಾಂಗದ ಆನಂದನ್‌(56) ಎಂಬುವರ ಪತ್ನಿ ಆರಾಯಿ(52) ಇತ್ತೀಚೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಹಿಮೋಗ್ಲೋಬಿನ್‌ ಕೊರತೆಗೆ ಸಂಬಂಧಿಸಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆ ಗರ್ಭಿಣಿ ಎಂದು ತಿಳಿಯುತ್ತದೆ. 

ಆರಾಯಿ ಈಗಾಗಲೇ ಒಂಬತ್ತು ಮಕ್ಕಳನ್ನು ಹೆರುವಾಗ ಯಾವತ್ತೂ ಆಸ್ಪತ್ರೆಗೆ ಹೋಗಿರಲಿಲ್ಲ. ಈ ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ 10ನೇ ಮಗುವಿನ ಹೆರಿಗೆ ಬಳಿಕ ಜನನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದರು. 

ಇದನ್ನು ಕೇಳಿಸಿಕೊಂಡಿದ್ದ ಆಕೆ, ಆಸ್ಪತ್ರೆಯಿಂದ ಕಾಣೆಯಾಗಿದ್ದಳು. ಬಳಿಕ ಆಕೆ ಮತ್ತೊಮ್ಮೆ ಪತ್ತೆಯಾದಾಗ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿಂದಲೂ ಆಕೆ ನಾಪತ್ತೆಯಾಗಿದ್ದಾಳೆ.

Follow Us:
Download App:
  • android
  • ios