ಶ್ರೀನಗರ: ಭಯೋತ್ಪಾದನೆಯ ವಿರುದ್ಧ ಸಮರ ಸಾರಿರುವ ಭಾರತಕ್ಕೆ ಉಗ್ರರ ಕರಿನೆರಳು ಇನ್ನೂ ನಿಂತಿಲ್ಲ. ಜಮ್ಮು- ಕಾಶ್ಮೀರದಲ್ಲಿ ಕಳೆದ ಐದು ತಿಂಗಳಲ್ಲಿ ಒಟ್ಟು 101 ಉಗ್ರರನ್ನು ಹೊಡೆದುರುಳಿಸಲಾಗಿದೆ. 

ಆದರೆ, ಇದೇ ವೇಳೆ 50 ಮಂದಿ ಯುವಕರು ಹೊಸದಾಗಿ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಲ್ ಖೈದಾ ಸಂಘಟನೆಯ ಜತೆ  ಗುರುತಿಸಿಕೊಂಡಿದೆ ಎಂದೇ ಹೇಳಲಾಗುವ ಅನ್ಸರ್ ಘಜ್ವತ್ ಉಲ್-ಹಿಂದ್ ಸಂಘಟನೆ ಮುಖ್ಯಸ್ಥ ಎನ್ನಲ್ಲಾದ ಝಾಕೀರ್ ಮೂಸಾ ಸೇರಿ 101ಉಗ್ರರನ್ನು ಕೊಲ್ಲಲಾಗಿದೆ. ಆ ಪೈಕಿ 23 ಮಂದಿ ವಿದೇಶಿಗರು. ಉಳಿದಂತೆ 78  ಸ್ಥಳೀಯರು.