Asianet Suvarna News Asianet Suvarna News

100 ಕೋಟಿ ಲಸಿಕೆ ಸಂಭ್ರಮದಲ್ಲಿ ಭಾರತ, ಚೀನಾದಲ್ಲಿ ಮತ್ತೆ ಕೋವಿಡ್ ಆತಂಕ; ಅ.22ರ ಟಾಪ್ 10 ಸುದ್ದಿ!

ಭಾರತದ ಲಸಿಕಾ ಅಭಿಯಾನ 100 ಕೋಟಿ ದಾಟಿದೆ. ಈ ಸಂಭ್ರಮವನ್ನು ದೇಶದೆಲ್ಲೆಡೆ ಅಚರಿಸಲಾಗಿದೆ. ಪ್ರಧಾನಿ ಮೋದಿ ಮತ್ಮ ಪ್ರೋಫೈಲ್ ಪಿಕ್ಟರ್ ಬದಲಿಸಿದ್ದಾರೆ. ರೈತರಿಗೆ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಇಂಡೋ-ಪಾಕ್ ಪಂದ್ಯದ 10 ಸೆಕೆಂಡ್ ಜಾಹೀರಾತಿಗೆ 30 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಸಿದ್ದು ವಿರುದ್ಧ ಗುಡುಗಿದ ಯಡಿಯೂರಪ್ಪ, ಸನ್ನಿ ಲಿಯೋನ್ ಹಾಟ್ ಫೋಟೋ ವೈರಲ್ ಸೇರಿದಂತೆ ಅಕ್ಟೋಬರ್ 22ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

100 crore covid vaccination dose to China Coronavirus top 10 News Of october 22 ckm
Author
Bengaluru, First Published Oct 22, 2021, 4:46 PM IST
  • Facebook
  • Twitter
  • Whatsapp

100 ಕೋಟಿ ಲಸಿಕೆ ಸಂಭ್ರಮ : ತಮ್ಮ Profile Picture ಬದಲಿಸಿದ ಪ್ರಧಾನಿ ಮೋದಿ!

100 crore covid vaccination dose to China Coronavirus top 10 News Of october 22 ckm

ಭಾರತ 100 ಕೋಟಿ  ಕೊರೋನಾ ಲಸಿಕೆ (Vaccine) ಪೂರೈಸಿದ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಟ್ವಿಟರ್‌ (Twitter) ಮತ್ತು ಫೇಸ್‌ಬುಕ್ (Facebook) ಖಾತೆಗಳ ಪ್ರೊಫೈಲ್‌ ಫೋಟೋ ಬದಲಾಯಿಸಿದ್ದಾರೆ.

ಪ್ರತಿಭಟಿಸುವ ಹಕ್ಕಿದೆ, ರಸ್ತೆ ಬಂದ್‌ ಮಾಡುವಂತಿಲ್ಲ: ರೈತ ಸಂಘಟನೆಗಳಿಗೆ ಸುಪ್ರೀಂ ಚಾಟಿ!

100 crore covid vaccination dose to China Coronavirus top 10 News Of october 22 ckm

 ದೆಹಲಿಯ(Delhi) ಗಡಿಗಳಲ್ಲಿ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿರುವುದು ಅವರ ಹಕ್ಕು. ಆದರೆ ಪ್ರತಿಭಟನೆಯ ನೆಪದಲ್ಲಿ ರಸ್ತೆಗಳನ್ನು ಅನಿರ್ದಿಷ್ಟಾವಧಿವರೆಗೆ ಬಂದ್‌ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌(Supreme Court) ಗುರುವಾರ ಹೇಳಿದೆ.

ಚೀನಾದಲ್ಲಿ ಮತ್ತೆ ಕೋವಿಡ್‌ ಸ್ಫೋಟ, ಭಾರೀ ಆತಂಕ: ವಿಮಾನ ರದ್ದು, ಶಾಲೆ ಬಂದ್‌!

100 crore covid vaccination dose to China Coronavirus top 10 News Of october 22 ckm

ಇಡೀ ವಿಶ್ವಕ್ಕೆ ಮಹಾಮಾರಿ ಕೊರೋನಾ(Covid 19) ಹಂಚಿದ ನೆರೆಯ ಚೀನಾದಲ್ಲಿ ಮತ್ತೆ ಭಯಾನಕ ವೈರಸ್‌ ಹರಡುವಿಕೆಯ ಸುಳಿವು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನೂರಾರು ವಿಮಾನಗಳನ್ನು(Flights) ರದ್ದುಗೊಳಿಸಿರುವ ಚೀನಾ ಸರ್ಕಾರ(China Govt), ಶಾಲೆ-ಕಾಲೇಜುಗಳನ್ನು(Schools and Colleges) ಬಂದ್‌ ಮಾಡಿದೆ

T20 World Cup ಇಂಡೋ-ಪಾಕ್‌ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!

100 crore covid vaccination dose to China Coronavirus top 10 News Of october 22 ckm

ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ನಡುವಿನ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಪಂದ್ಯಕ್ಕೆ ಕೇವಲ 2 ದಿನ ಬಾಕಿ ಇದೆ. ಅಕ್ಟೋಬರ್ 24ರ ಭಾನುವಾರ ಸಂಜೆ ಕ್ರಿಕೆಟ್‌ ಅಭಿಮಾನಿಗಳು ಟೀವಿ ಮುಂದೆ ಪ್ರತಿಷ್ಠಾಪನೆಗೊಳ್ಳಲಿದ್ದಾರೆ. ವಿಶ್ವಕಪ್‌ಗಳಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಸೋತೇ ಇಲ್ಲ. ಟೀಂ ಇಂಡಿಯಾ (Team India) ತನ್ನ ಅಜೇಯ ಓಟ ಮುಂದುವರಿಸುವ ಪಣತೊಟ್ಟಿದ್ದು, ಈ ಪಂದ್ಯಕ್ಕಾಗಿ ಕ್ರಿಕೆಟ್‌ ಜಗತ್ತೇ ಕಾದು ಕುಳಿದಿದೆ.

ಎದೆ ಸೀಳು ತೋರಿಸಿದ ಸನ್ನಿ ಲಿಯೋನ್: ಹಾಟ್ ಫೋಟೋಸ್ ವೈರಲ್

100 crore covid vaccination dose to China Coronavirus top 10 News Of october 22 ckm

ಬಾಲಿವುಡ್ ನಟಿ ಸನ್ನಿ ಲಿಯೋನ್(Sunny Leone) ಎದೆ ಸೀಳು ತೋರಿಸಿಕೊಂಡು ಹಾಟ್ ಬ್ಲಾಕ್ & ವೈಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಟಿಯ ಹಾಟ್ & ಬೋಲ್ಡ್ ಫೋಟೋಸ್ ವೈರಲ್ ಆಗಿವೆ

ಅ​ನ್ನ​ಭಾಗ್ಯ ಅಕ್ಕಿ ನೀಡಿದ್ದು ಸಿದ್ದು ಅಲ್ಲ, ಕೇಂದ್ರ: ಯಡಿಯೂರಪ್ಪ

100 crore covid vaccination dose to China Coronavirus top 10 News Of october 22 ckm

‘ಅನ್ನಭಾಗ್ಯದ ಅಕ್ಕಿ ನೀಡಿದ್ದು ಕೇಂದ್ರ ಸರ್ಕಾರ(Central Government). ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ(Siddaramaiah) ಕೊಟ್ಟ ಯೋಜನೆ ಇದಲ್ಲ. ಭಾಗ್ಯಲಕ್ಷ್ಮಿ, ಕಿಸಾನ್‌ ಸಮ್ಮಾನ ಇವೇ ಮುಂತಾದ ಯೋಜನೆಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಾವು ಕೊಟ್ಟಿದ್ದೇವೆ. ಇದರ ಫಲವಾಗಿಯೇ ಇಂದು ದೇಶದಲ್ಲಿ ಬಿಜೆಪಿ(BJP) ಪರವಾಗಿ ಜನರ ಒಲವು ಇದೆ’

Ola ಕಂಪನಿಯಲ್ಲಿ 10,000 ಉದ್ಯೋಗಾವಕಾಶಗಳು !

100 crore covid vaccination dose to China Coronavirus top 10 News Of october 22 ckm

ದೇಶದ ಪ್ರಸಿದ್ಧ ಕ್ಯಾಬ್‌ ಕಂಪನಿ ಓಲಾ (Ola) ಶೀಘ್ರದಲ್ಲೇ ಹತ್ತು ಸಾವಿರ ಜನರ ನೇಮಕಾತಿ ಮಾಡಲಿದೆ ಎಂದು ತಿಳಿಸಿದೆ. ಮುಂದಿನ 12 ಹನ್ನೆರಡು ತಿಂಗಳಲ್ಲಿ ತನ್ನ ಓಲಾ ಕಾರ್ಸ್‌ನ (Ola Cars) ಒಟ್ಟು ಸರಕು ಬೆಲೆಯನ್ನು (GMV) 2  ಬಿಲಿಯನ್‌ನಷ್ಟು ಹೆಚ್ಚಿಸಲು ಓಲಾ ನಿರ್ಧರಿಸಿದೆ.

NCB ಆಫೀಸರ್‌ ಸಮೀರ್‌ BJP ಕೈಗೊಂಬೆ: ಜೈಲ್‌ಗೆ ಹಾಕದೆ ಬಿಡಲ್ಲ: ಸಂಸದ ಚಾಲೆಂಜ್

100 crore covid vaccination dose to China Coronavirus top 10 News Of october 22 ckm

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ಮೇಲೆ ನಿರಂತರ ದಾಳಿ ಮಾಡುತ್ತಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಅಧಿಕಾರಿಯನ್ನು ಜೈಲಿಗೆ ಹಾಕುವವರೆಗೂ ಸುಮ್ಮನಿರುವುದಿಲ್ಲ ಎಂದಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ವಾಂಖೇಡೆ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ.

Follow Us:
Download App:
  • android
  • ios