ಪುಣೆ[ಡಿ.06] ಪುಣೆ ಗ್ರಾಮೀಣ ಪೊಲೀಸರು ಸೇವೆಯಿಂದ ನಿವೃತ್ತಿಯಾದ ಶ್ವಾನಗಳಿಗೆ ಪೊಲೀಸರು ಸಕಲ ಗೌರವ ವಂದನೆ ಸಲ್ಲಿಸಿದರು.

ರಾಧಾ ಮತ್ತು ರಾಣಿ ಸೇವೆಯಿಂದ ನಿವೃತ್ತಿಯಾದರು.  ಸ್ಥಳೀಯರು ಮತ್ತು ಈ ಶ್ವಾನಗಳ ಸ್ನೇಹಿತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಜೆಜುರಿ ಬಾಲಕಿಯ ಅತ್ಯಾಚಾರ ಮತ್ತು ಕೊಲೆ. ರಂಜಾಗೋನ್ ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಈ ಶ್ವಾನಗಳ ಕೊಡುಗೆ ಮಹತ್ವದ್ದಾಗಿತ್ತು.

ಮರೆಯಾದ  ಚಿಕ್ಕಮಗಳೂರಿನ ಪತ್ತೆದಾರಿ

ಡಾಬರ್‌ ಮನ್ ತಳಿಗೆ ಸೇರಿದ ನಾಯಿಗಳು ಬಾಂಬ್‌ ನಿಷ್ಕ್ರಿಯ ದಳದಲ್ಲಿಯೂ ಕೆಲಸ ಮಾಡಿವೆ. ಸಕ್ಕರೆ ಕಾರ್ಖಾನೆಯ ಕಾರ್ಮಿಕನ ಕೊಲೆ, ಚಿರತೆ ಸಾವು, ಶಿರೂರ್ ಎಸ್‌ಬಿಐ ದರೋಡೆ, ತಾರಕವಾಡಿಯ ಬಾಲಕನ ಕೊಲೆ ಹೀಗೆ ಹತ್ತು ಹಲವು ಪ್ರಕರಣ ಪತ್ತೆ ಹಚ್ಚಿದ ಖ್ಯಾತಿ ಶ್ವಾನಗಳಿಗೆ ಸಲ್ಲಿಕೆಯಾಗುತ್ತದೆ.

ಪೊಲೀಸರಿಗೆ ತಲೆನೋವು ತಂದಿದ್ದ 15 ಕ್ಕೂ ಅಧಿಕ ಪ್ರಕರಣವನ್ನು ತಮ್ಮ ಜಾಣ್ಮೆಯಿಂದ ಪತ್ತೆಮಾಡಿದ್ದ ಶ್ವಾನಗಳಿಂದು ನಿವೃತ್ತಿ ಜೀವನಕ್ಕೆ ತೆರಳಿವೆ. ರಾಧಾ ಶ್ವಾನವನ್ನು ಪುಣೆ ಗ್ರಾಮೀಣ ಠಾಣೆಯ ಪೊಪಟ್ ವಾಗ್ಮೋರೆ ದತ್ತು ಪಡೆದುಕೊಂಡಿದ್ದಾರೆ.