Asianet Suvarna News Asianet Suvarna News

ಯಶವಂತಪುರ - ತುಮಕೂರು ಸೇರಿ 10 ವಿಶೇಷ ರೈಲು ಸೇವೆ

ಯಶವಂತಪುರದಿಂದ ತುಮಕೂರು ಮಾರ್ಗ ಸೇರಿದಂತೆ ದೇಶದ ಇನ್ನಿತರ ಮಾರ್ಗಗಳಲ್ಲಿ 10 ‘ಸೇವಾ ಸರ್ವೀಸ್’ ರೈಲು ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ. 

10 Special Train To Run In India
Author
Bengaluru, First Published Oct 15, 2019, 8:38 AM IST

ನವದೆಹಲಿ[ಅ.15]: ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳಿಂದ ನಗರ ಪ್ರದೇಶಗಳ ನಡುವಿನ ಸಂಚಾರವನ್ನು ಮತ್ತಷ್ಟುಸುಧಾರಿಸುವ ನಿಟ್ಟಿನಲ್ಲಿ ಯಶವಂತಪುರದಿಂದ ತುಮಕೂರು ಮಾರ್ಗ ಸೇರಿದಂತೆ ದೇಶದ ಇನ್ನಿತರ ಮಾರ್ಗಗಳಲ್ಲಿ 10 ‘ಸೇವಾ ಸರ್ವೀಸ್’ ರೈಲು ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ. 

ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಅವರು  ದೆಹಲಿ-ಶಮ್ಲಿ ಮಾರ್ಗದ ನಿತ್ಯದ ರೈಲು ಸೇವೆಗೆ ಇಂದು ಹಸಿರು ನಿಶಾನೆ ತೋರುವ ಮೂಲಕ ಈ ನೂತನ ಸೇವಾ ಸರ್ವೀಸ್  ರೈಲುಗಳಿಗೆ ಚಾಲನೆ ನೀಡಲಿದ್ದಾರೆ. 

ಈ ಪೈಕಿ ದೆಹಲಿ-ಶಮ್ಲಿ, ಭುವನೇಶ್ವರ ಮತ್ತು ನಯಾಗಢ ಪಟ್ಟಣ, ಮುರ್ಕೊಂಗ್‌ಸೆಲೆಕ್ಸ್‌ ಮತ್ತು ದಿಬ್ರೂಗಢ, ಕೋಟಾ ಮತ್ತು ಝಲಾವರ್‌ ನಗರ ಮತ್ತು ಕೊಯಮತ್ತೂರು ಮತ್ತು ಪಳನಿ ಮಾರ್ಗದ ರೈಲುಗಳು ಪ್ರತಿನಿತ್ಯ ಸಂಚರಿಸಲಿವೆ. 

ಇನ್ನು ವಾದ್‌ನಗರದಿಂದ ಮಹೆಸನಾ, ಅಸಾರ್ಯದಿಂದ ಹಿಮ್ಮತ್‌ನಗರ, ಕರೂರ್‌ನಿಂದ ಸೇಲಂ ಹಾಗೂ ಕೊಯಮತ್ತೂರಿನಿಂದ ಪೊಲ್ಲಾಚಿ ಮಾರ್ಗದ ರೈಲುಗಳು ವಾರಕ್ಕೆ 6 ದಿನ ಸಂಚರಿಸಲಿವೆ.

Follow Us:
Download App:
  • android
  • ios