ರಾಂಬನ್‌[ಸೆ.29]: ಜಮ್ಮು- ಕಾಶ್ಮೀರದ ರಾಂಬನ್‌ ಜಿಲ್ಲೆಯಲ್ಲಿ ನಾಗರಿಕನೊಬ್ಬನನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಶನಿವಾರ ಹತ್ಯೆ ಮಾಡಿವೆ. ಈ ಕಾರ್ಯಾಚರಣೆಯಲ್ಲಿ ಯೋಧನೊಬ್ಬ ಹುತಾತ್ಮನಾಗಿದ್ದು, ಇಬ್ಬರು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.

ರಾಂಬನ್‌ನಲ್ಲಿ ಬೀಡುಬಿಟ್ಟಿದ್ದ ಐವರು ಉಗ್ರರ ಗಂಪು, ಶನಿವಾರ ಬೆಳಗಿಯ ಸಮಯದಲ್ಲಿ ಸæೕನೆಯ ಕ್ಷಿಪ್ರ ಕಾರ್ಯಾಚರಣೆಯ ಪಡೆಯ ಮೇಲೆ ಗುಂಡಿನ ದಾಳಿ ಹಾಗೂ ಗ್ರೆನೇಡ್‌ಗಳನ್ನು ಎಸೆದು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿತ್ತು. ಬಳಿಕ ಭದ್ರತಾ ಪಡೆಗಳು ಉಗ್ರರ ಬೆನ್ನು ಹತ್ತಿದ್ದವು.

ಈ ಮಧ್ಯೆ ಮೂವರು ಉಗ್ರರು ಜಮ್ಮು- ಕಿಶ್‌್ತವಾರ್‌ ರಾಷ್ಟ್ರೀಯ ಹೆದ್ದಾರಿಯ ಬಾಕೋಟೆ ಪ್ರದೇಶದ ಮನೆಯೊಂದಕ್ಕೆ ನುಗ್ಗಿ ನಾಗರಿಕನೊಬ್ಬನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಮನೆಯನ್ನು ಸುತ್ತುವರಿದಿದ್ದ ಭದ್ರತಾ ಪಡೆಗಳು 5 ತಾಸಿನ ನಿರಂತರ ಕಾರ್ಯಾರಣೆಯ ಬಳಿಕ ಮೂವರು ಉಗ್ರರನ್ನು ಹತ್ಯೆ ಮಾಡಿ ಮನೆಯ ಮಾಲೀಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ಉಳಿದ ಇಬ್ಬರು ಉಗ್ರರಿಗೆ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಪೊಲಿಸರು ತಿಳಿಸಿದ್ದಾರೆ.