ನವದೆಹಲಿ(ಮೇ.22)  ಟಿಕ್ ಟಾಕ್ ಸೆಲಿಬ್ರಿಟಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ಮೋಹಿತ್ ಬಹದ್ದೂರ್‌ಗಢದ ನಿವಾಸಿಯಾಗಿದ್ದು ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು.

ಮಂಗಳವಾರ ಸಂಜೆ ಸ್ನೇಹಿತನನ್ನು ಭೇಟಿಯಾಗಲು  ಮೋಹಿತ್ ತೆರಳಿದ್ದರು.  ಆ ವೇಳೆ ಸ್ಕೂಟಿಯಲ್ಲಿ ಬಂದ ಮೂವರು ಯುವಕರು ಆತನ ಮೇಲೆ ಗುಂಡಿನ ದಾಳಿ ಮಾಡಿದ ಪರಿಣಾಮ ಮೋಹಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟಿಕ್ ಟಾಕ್ ನಲ್ಲಿ ಸಖತ್ ಟ್ರೋಲ್ ಆದ ನಿಖಿಲ್ ಎಲ್ಲಿದ್ದಿಯಪ್ಪ

ಪೊಲೀಸರು ಪ್ರಾಥಮಿಕ ತನಿಖೆ ಮಾಡಿದ್ದು ವೈಯಕ್ತಿಕ ದ್ವೇಷವೇ ಹತ್ಯೆಗೆ ಕಾರಣ ಎನ್ನಲಾಗುಗಿದೆ. ಹತ್ಯೆಯಾದವನ ಫೋನ್ ಕಾಲ್ ವಿವರವನ್ನು ಪೊಲೀಸರು ಪರಿಶೀಲಿಸಿದ್ದಾರೆ. ದಾಳಿಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.