ಸನ್ನಿ ಲಿಯೋನ್ ದೇವತೆಯೋ? ಯುವಜನತೆಗೆ ಅಸಹ್ಯವನ್ನು ಹಂಚಿದವಳೋ? ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ!
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಚರ್ಚೆಗಳು ಭಾರೀ ಕುತೂಹಲ ಉಂಟುಮಾಡುತ್ತದೆ. ಪರ-ವಿರೋಧಗಳ ಭಾರೀ ಚರ್ಚೆ ಜನರ ಗಮನವನ್ನೂ ಸೆಳೆಯುತ್ತದೆ. ಅಂಥದ್ದೊಂದು ಚರ್ಚೆ ಮಾಜಿ ನೀಲಿತಾರೆ ಸನ್ನಿಲಿಯೋನ್ ವಿಚಾರದಲ್ಲಿ ಆಗುತ್ತಿದೆ.
ಇಂದು ನಟಿ ಸನ್ನಿ ಲಿಯೋನ್ ಬರ್ತ್‌ಡೇ. ಸೋಮವಾರ 43ನೇ ವರ್ಷಕ್ಕೆ ಕಾಲಿಟ್ಟ ಮಾಜಿ ನೀಲಿ ಚಿತ್ರ ತಾರೆಗೆ ಅಭಿನಂದನೆಗಳ ಸುರಿಮಳೆಯೂ ಆಗುತ್ತಿದೆ. ಅದಕ್ಕೆ ಕನ್ನಡಿಗರೂ ಕೂಡ ಹೊರತಲ್ಲ. ಸನ್ನಿ ಲಿಯೋನ್ 'ಚಿತ್ರ' ಗಳನ್ನೇ ಕಂಡು ಅಭಿಮಾನದ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಫೋಟೋ ಹಾಕಿಕೊಂಡು ಶುಭ ಕೋರುತ್ತಿದ್ದಾರೆ. ಒಂದು ಕಾಲದಲ್ಲಿ ನೀಲಿಚಿತ್ರ ತಾರೆಯಾಗಿದ್ದರೂ. ಅದನ್ನೆಲ್ಲಾ ಬಿಟ್ಟು ಸಮಾಜಸೇವೆ ಹಾಗೂ ಬಡ ಮಕ್ಕನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ಹೊಸ ಜೀವನವನ್ನು ಆರಂಭಿಸಿದ್ದಾರೆ. ಈಕೆ ಕತ್ತಲ ಪ್ರಪಂಚದ ದೇವತೆಯಾಗಿದ್ದಾಕೆ ಇಂದು ಗೌರವಯುತ ಹೊಸ ಜೀವನವನ್ನು ಕಳೆಯುತ್ತಿದ್ದಾಳೆ ಈಕೆ ಎಲ್ಲರಿಗೂ ಮಾದರಿ ಎನ್ನುವಂಥೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ಈಕೆ ಕತ್ತಲ ಪ್ರಪಂಚದ ಅಪ್ಸರೆ, ದೇವತೆಯಲ್ಲ ಎಂದು ಹೇಳಿದ್ದಾರೆ. ಸನ್ನಿ ಲಿಯೋನ್ ದೇವತೆಯೋ? ಯುವಜನತೆಗೆ ಅಸಹ್ಯವನ್ನು ಹಂಚಿದವಳೋ? ಎನ್ನುವ ಬಗ್ಗೆಯೇ ಸೋಶಿಯಲ್ ಮೀಡಿಯಾ ಚರ್ಚೆ ಮಾಡುತ್ತಿದೆ.
' ಆಕೆ ವೇಶ್ಯೆಯಾಗಿದ್ದಿದ್ದಲ್ಲಿ ಕೇವಲ ತನ್ನ ಜೊತೆ ಮಲಗಿದವರ ಕುಟುಂಬಕ್ಕೆ ಮಾತ್ರ ಮಾರಕವಾಗಿರುತ್ತಿದ್ದಳೇನೋ, ಆದರೆ ಪಾರ್ನ್ ಸ್ಟಾರ್ ಆದಾಗ ಒಂದಿಡೀ ಯುವಜನತೆಯನ್ನು( ಅದರಲ್ಲಿ ಮಕ್ಕಳು ಹದಿಹರೆಯದವರೇ ಜಾಸ್ತಿ) ಪ್ರಚೋದಿಸಿದಗ್ದಾಳೆ. ಅವರಲ್ಲಿ ಕೆಲವರು ವಿಕೃತಕಾಮದ ಹಿಂದೆ ಬಿದ್ದಿರಬಹುದು, ಅಥವಾ ಕಾಮವನ್ನೇ ವಿಜೃಂಭಿಸಿ ಅದೆಷ್ಟೋ ಕುಟುಂಬಗಳು ಒಡೆದುಹೋಗಿದೆಯೋ. ಈಗ ಮಕ್ಕಳನ್ನು ದತ್ತು ಪಡೆದ ಮಾತ್ರಕ್ಕೆ, ಮಕ್ಕಳ ಅನಾಥಾಶ್ರಮಕ್ಕೆ ಹಣ ಡೊನೇಟ್ ಮಾಡಿದ ಮಾತ್ರಕ್ಕೆ ಆಗ ಹಾಳಾದ ಜೀವನಗಳು ಸರಿ ಹೋಗಿಬಿಡುವುದಿಲ್ಲ. ಆಕೆ ಇತರರಿಗಿಂತ ದೊಡ್ಡವಳಾಗಿಬಿಡಲ್ಲ,
ಹೀಗಾದರೆ ನಾಳೆ ಪೆನ್‌ಡ್ರೈವ್ ಹೀರೋ ಮರಳಿ ಬಂದು ದಾನ ಧರ್ಮದಲ್ಲಿ ತೊಡಗಿಕೊಂಡರೆ, ಭಯೋತ್ಪಾದಕ ಮಕ್ಕಳನ್ನು ಬೆಳೆಸಿಬಿಟ್ಟರೆ, ದಂಡುಪಾಳ್ಯ ಗ್ಯಾಂಗ್ ತರಹದವರು ದಾನ ಮಾಡಲಾರಂಭಿಸಿದರೇ ? ದೇವರಾಗಿ ಬಿಡುತ್ತಾರಾ? ' ಎಂದು ಫೇಸ್‌ಬುಕ್‌ನಲ್ಲಿ ಒಬ್ಬರು ಪೋಸ್ಟ್ ಮಾಡಿದ್ದಾರೆ.
'ಸನ್ನಿ ದೇವತೆ ಅಂದ್ರೆ ನಗು ಬರುತ್ತೆ. ಆದರೆ ಅದನ್ನು ಹೇಳಿದರೆ ನಾವೇ ಕೆಟ್ಟವರು. ವೇಶ್ಯೆಯರ ಬಗ್ಗೆಯೂ ಕೆಲವರು ಒಳ್ಳೆಯ ಮಾತನಾಡ್ತಾರೆ. ನನಗಂತೂ ವಿಚಿತ್ರ ಅನ್ಸುತ್ತೆ. ನಾಲ್ಕು ಮನೆ ಕೆಲಸ ಮಾಡಿದರೆ ಎಷ್ಟೋ ಸಂಪಾದಿಸಬಹುದು. ಮನೆ ಕೆಲಸವೇ ಅಲ್ಲ, ಮಾಡಲು ಬೇಕಾದಷ್ಟು ಕೆಲಸ ಕೂಡ ಇದೆ. ಅಂತದ್ರಲ್ಲಿ ಅದೇ ಕೆಲಸ ಬೇಕಾ' ಎಂದು ಇನ್ನೊಬ್ಬರು ಬರೆದಿದ್ದಾರೆ.
'ಅವಳ ಜನಪ್ರಿಯತೆಯನ್ನು ಹೆಚ್ಚಿಸಿದ್ದು ಬಾಲಿವುಡ್‌ನ ಮಾರ್ಕೆಟಿಂಗ್ ತಂತ್ರ. ಮಕ್ಕಳಿಗೆ ಅವಳ ವಿಡಿಯೋಗಳು ತಲುಪಿದ್ದು ಹಿರಿಯರ ಬೇಜವಾಬ್ದಾರಿಯಿಂದ. ಜಗತ್ತಿನ ಅತಿಪುರಾತನ ಉದ್ಯಮವನ್ನು ಇದುವರೆಗೂ ನಿಷೇಧಿಸಲು ಸಾಧ್ಯವಾಗಿಲ್ಲ. ಚಿತ್ರೋದ್ಯಮವೇ, ಈ ಪುರಾತನ ದಂಧೆಯ ಹೆಬ್ಬಾಗಿಲು. ಅರೆಬರೆ ತೋರಿಸಿ, ರೇಪ್ ಸೀನ್ ತೋರಿಸಿ ಕೆರಳಿಸುವುದಕ್ಕಿಂತ ಪೂರ್ತಿ ತೋರಿಸಿ ತಣಿಸುವುದೇ ಮೇಲು ಎಂದು ಕೆಲವೊಮ್ಮೆ ಅನಿಸುತ್ತದೆ. ಮತ್ತು ಈ ತಣಿಯುವಿಕೆಯಿಂದ ಎಷ್ಟೋ ಸಂಭಾವ್ಯ ಅಪರಾಧಗಳು ತಪ್ಪಿರಲೂ ಬಹುದು. ಈ ಅಂಕಿಅಂಶ ಲೆಕ್ಕಕ್ಕೆ ಸಿಗುವುದಿಲ್ಲ. ಹೆಂಗಸು ಉದ್ಯೋಗವನ್ನೇ ಮಾಡಬಹುದು ಎಂದಮೇಲೆ ಯಾವ ಉದ್ಯೋಗ ಅವರಿಗಿಷ್ಟವೋ ಅದನ್ನು ಮಾಡುವುದರಲ್ಲಿ ತಪ್ಪೇನಿದೆ ? ಇಷ್ಟಕ್ಕೂ ಅದೇನೂ ಕಾನೂನುಬಾಹಿರ ಉದ್ಯಮವಲ್ಲವಲ್ಲ ? ನಿಷೇಧವಿರುವ ದೇಶದಲ್ಲಿ ಅದನ್ನು ದೊರೆಯುವಂತೆ ಮಾಡಿದವರದ್ದು ಮೊದಲ ತಪ್ಪು. ಅವಳು ದೇವತೆಯಲ್ಲದಿರಬಹುದು, ಆದರೆ ವಿಲನ್ನೂ ಅಲ್ಲ' ಎಂದು ಮತ್ತೊಬ್ಬರು ಸನ್ನಿ ಪರವಾಗಿ ಕಾಮೆಂಟ್ ಮಾಡಿದ್ದಾರೆ. 'ನನ್ನ ಪ್ರಕಾರ ಅವಳು ಅಪ್ಸರೆ ಅಷ್ಟೇ ದೇವತೆ ಏನಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ.
'ಈಕೆ ತನ್ನ ಚರಿತ್ರೆಯಿಂದಾಗಿ ಹಾಸೆಲೆಯ ಉಂಡು ಬೀಸಿ ಒಗೆಯುತ್ತಾರೆಂದೇ ಎಲ್ಲರೂ ಭಾವಿಸಿದ್ದರು. ಅದೇ ರೀತಿ ಬಳಸಿಕೊಳ್ಳಲು ಎಲ್ಲರೂ ತಯಾರಿದ್ದರು. ( ಎಲ್ಲೋ ಓದಿದಂತೆ ) ಹಳೆಯ ಬದುಕಿಗೆ ಗುಡ್ ಬೈ ಹೇಳಿದ್ದಳು. ಮುಮ್ತಾಜ್ ಳಂತೆ ಸ್ವಶಕ್ತಿಯಿಂದ ಓರ್ವ ನಟಿಯಾಗಿ ನೆಲೆ ನಿಂತಳು. ಇದಂತೂ ಸಾಮಾನ್ಯ ಸಾಧನೆಯಲ್ಲ. ಅಲ್ಲದೆ ಎಲ್ಲೂ ಸಾರ್ವಜನಿಕವಾಗಿ ಚೆಲ್ಲು ಚೆಲ್ಲಾಗಿ ಆಡಲಿಲ್ಲ. ಅವಳ ಚರಿತ್ರೆಯ ಬಗ್ಗೆ ಹೀನವಾಗಿ ಮಾತನಾಡದವರೇ ಇರಲಿಲ್ಲ. ಆಡಿಕೊಳ್ಳುವವರಿಗೆ ಆಸ್ಪದವಾದಂತೆ ಘನತೆ ಯಿಂದಲೇ ಇದ್ದಾಳೆ. There was an ugly past. But now? ಈಗೇನೋ ಸಮಾಜಮುಖಿಯಾಗಿ ನಾಲ್ಕಾರು ಒಳ್ಳೆಯ ಕೆಲಸ ಮಾಡಿದರೆ ನಮಗೇಕೆ ಕಿಚ್ಚು?' ಎಂದು ಇನ್ನೊಬ್ಬರು ಸನ್ನಿ ಪರವಾಗಿ ಮಾತನಾಡಿದ್ದಾರೆ.
ಬರೀ 10 ಲಕ್ಷದಲ್ಲಿ ಸನ್ನಿ ಲಿಯೋನ್ ಸ್ಟಾರ್ಟ್ ಮಾಡಿದ್ದ ಕಂಪನಿಯಿಂದ 10 ಕೋಟಿ ವಹಿವಾಟು!
'ನಮ್ಮ ದೇಶದಲ್ಲಿ ಸುಧಾಮೂರ್ತಿ ದೇವತೆ ಅಂದ್ರೆ ಭಯಂಕರ ವಿರೋಧ ಮಾಡುವ ಕಚಾಡಗಳಿಗೆ .. ಈ ಸನ್ನಿ ಲಿಯೋನ್ ದೇವತೆ ಅಂತ ಹೇಳಿ ಸಮರ್ಥನೆ ಮಾಡುವುದಕ್ಕೆ ಬರುವುದನ್ನು ನೋಡಿ ವಿಷಾದವಾಗುತ್ತಿದೆ' ಎಂದು ಕಾಮೆಂಟ್ ಮಾಡಲಾಗಿದೆ.
ಸಹೋದರ ನಗ್ನ ಫೋಟೋ ಮಾರಾಟ ವಿಚಾರ ಹೇಳಿದರೂ ಕುಗ್ಗದೆ, ರೆಡ್‌ಗೌನ್‌ನಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್