- ಸತೀಶ್‌ ಗುಜ್ರಾಲ್‌, ವಿಶ್ವ ವಿಖ್ಯಾತ ಕಲಾವಿದ

ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿ ಭಾರತದ ಕಲಾಪ್ರಪಂಚವನ್ನು ಅಗಲಿದ ಅನನ್ಯ ಕಲಾವಿದ ಸತೀಶ್‌ ಗುಜ್ರಾಲ್‌ ಹುಟ್ಟಿದ್ದು 25ನೇ ಡಿಸೆಂಬರ್‌ 1925ರ ಅಂದಿನ ಅವಿಭಜಿತ ಪಂಜಾಬ್‌ ಪ್ರಾಂತ್ಯದ ಝೀಲಂನಲ್ಲಿ ಅಂದರೆ ಈಗಿನ ಪಾಕಿಸ್ತಾನದಲ್ಲಿ.

ತಮ್ಮ 8ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಕಾಶ್ಮೀರದ ರಿಕೆಟಿ ಸೇತುವೆ ದಾಟುವ ಸಂದರ್ಭದಲ್ಲಿ ಉಂಟಾದ ಅವಘಡದಲ್ಲಿ ಶ್ರವಣ ದೋಷ ತಲೆದೋರಿ ತಮ್ಮ ಶಾಲಾ ವಿದ್ಯಾಭ್ಯಾಸಕ್ಕೂ ಅಡ್ಡಿಯಾಗಿ ಅವೆಲ್ಲವನ್ನೂ ಮೆಟ್ಟಿನಿಂತು ಭಾರತೀಯ ಕಲಾಜಗತ್ತಿನ ಮಿನುಗುತಾರೆಯಾದದ್ದು ಅವರ ಛಲದಿಂದಲೇ. ಲಾಹೋರಿನ ಮೇಯೋ ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ನಂತರದ ಮುಂಬಯಿಯ ಜೆಜೆ ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ ವ್ಯಾಸಂಗದ ಮುಂದುವರಿಕೆ. ಆ ಕಾಲದಲ್ಲಿಯೇ ಪ್ರಗತಿಪರ ಕಾಲಾವಿದರ ಒಕ್ಕೂಟ (ಪಿ.ಎ.ಜಿ.) ರಚಿಸಿದ್ದ ಎಫ್‌.ಎನ್‌. ಸೋಜಾ, ಎಸ್‌.ಎಚ್‌. ರಾಜಾ ಅಲ್ಲದೆ ಎಂ.ಎಫ್‌.ಹುಸೇನ್‌ರಿದ್ದ ತಂಡಕ್ಕೆ ಸೇರ್ಪಡೆ. ಮುಂದೆ 1952ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಮೆಕ್ಸಿಕೋಗೆ ಪ್ರಯಾಣ. ಅಲ್ಲಿ ಅವರಿಗೆ ದೊರೆತದ್ದು ಅಂದಿನ ಜಗತ್ತಿನ ಶ್ರೇಷ್ಠ ಭಿತ್ತಿರಚನೆಕಾರರಾದ ಡೀಗೋ ರೆವೆರಾರಂಥವರ ಮಾರ್ಗದರ್ಶನ.

ನಟ ಹಾಗೂ ಚರ್ಮರೋಗ ತಜ್ಞ ಸೇತುರಾಮನ್‌ ಇನ್ನಿಲ್ಲ!

ಗುಜ್ರಾಲ್‌ ಅವರ ನವ್ಯ ಕಲಾಕೃತಿಗಳಲ್ಲಿ ಮೇಳೈಸಿದ್ದು ಯುರೋಪಿಯನ್‌ ಶೈಲಿಯನ್ನು ಹೊರತುಪಡಿಸಿದ ಭಾರತೀಯ ಚರಿತ್ರೆ, ಜನಪದೀಯ ಸೊಗಡು ಮತ್ತು ಪುರಾಣಗಳ ಅಂತಃಸತ್ವ. ಈ ಕಾರಣದಿಂದಾಗಿಯೇ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ. ಕಲೆಯೊಂದಿಗೆ ಹಲವಾರು ಭಿತ್ತಿಚಿತ್ರಗಳ ರಚನೆ, ವಾಸ್ತುಶಿಲ್ಪದ ರಚನೆಯೊಂದಿಗೆ ಬಾಲ್ಯದ ಪುಸ್ತಕಗಳ ಒಡನಾಟ ಅವರಿಗೆ ಬರವಣಿಗೆಯಲ್ಲಿಯೂ ಹೆಸರು ತಂದಿತು. ಭಾರತದ ಮಾಜಿ ಪ್ರಧಾನಿ ಇಂದ್ರಕುಮಾರ್‌ ಗುಜ್ರಾಲ್‌ ಇವರ ಹಿರಿಯ ಸಹೋದರ. ಪತ್ನಿ ಕಿರಣ್‌. ಸುದೀರ್ಘ ಕಾಲ ಶ್ರವಣ ದೋಷ ಹೊಂದಿದ್ದ ಇವರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಪರಿಹಾರ ಸಿಕ್ಕಿದ್ದು 1998ರಲ್ಲಿ!

ಅನೇಕಾನೇಕ ಕಲಾವಿದರಿಗೆ ಸ್ಫೂರ್ತಿಯಾಗಿದ್ದ ಸತೀಶ್‌ ಗುಜ್ರಾಲ್‌ ಇದೇ ಮಾಚ್‌ರ್‍ 26ರಂದು ಅಗಲಿದ್ದು ಕಲಾಜಗತ್ತಿಗೊಂದು ತುಂಬಲಾರದ ನಷ್ಟ. ಈ ಮೇರು ಕಲಾಚೇತನಕ್ಕೆ ಭಾವಪೂರ್ಣ ನಮನ.-ಸುದ

20ನೇ ಶತಮಾನದ ಪ್ರಪಂಚದ ಸಾವಿರ ಶ್ರೇಷ್ಠ ಕಟ್ಟಡ ವಾಸ್ತುಶಿಲ್ಪಗಳಲ್ಲಿ ಒಂದೆಂದು ಗುರುತಿಸಿಕೊಂಡ ನವದೆಹಲಿಯ ಬೆಲ್ಜಿಯಂ ಎಂಬೆಸ್ಸಿ ಕಟ್ಟಡದ ವಾಸ್ತುಶಿಲ್ಪದ ರೂವಾರಿ ಗುಜ್ರಾಲ್‌ ಅವರು. ಅದಕ್ಕಾಗಿ ಬೆಲ್ಜಿಯಂ ಸರ್ಕಾರದಿಂದ ‘ಆರ್ಡರ್‌ ಆಫ್‌ ಕ್ರೌನ್‌’ ಅತ್ಯುನ್ನತ ಗೌರವ. 1998ರಲ್ಲಿ ಭಾರತದ ಎರಡನೇ ಶೇಷ್ಠ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಗಳಿಸಿದ ಇವರು ಎಲ್ಲಾ ಯುವ ಕಲಾವಿದರಿಗೆ ಸ್ಫೂರ್ತಿ ಮಾತ್ರವಲ್ಲ ದೈಹಿಕ ನ್ಯೂನತೆಯನ್ನು ಮೀರಿ ವಿಶ್ವದಾದ್ಯಂತ ಭಾರತೀಯ ಕಲೆಯ ಕೀರ್ತಿಯನ್ನು ಬೆಳಗಿಸಿದ ಮೇರು ಕಲಾವಿದರು. ಅನೇಕಾನೇಕ ಕಲಾವಿದರಿಗೆ ಸ್ಫೂರ್ತಿಯಾಗಿದ್ದ ಇವರು ಇದೇ ಮಾಚ್‌ರ್‍ 26ರಂದು ಅಗಲಿದ್ದು ಕಲಾಜಗತ್ತಿಗೊಂದು ತುಂಬಲಾರದ ನಷ್ಟ. ಈ ಮೇರು ಕಲಾಚೇತನಕ್ಕೆ ಭಾವಪೂರ್ಣ ನಮನ.