ಬೆಂಗಳೂರು (ಆಗಸ್ಟ್ 23): ನಟ ದಿಲೀಪ್‌ ಗುರುವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿಕೊಂಡು ಬಂದು, ಚಾಮರಾಜಪೇಟೆಯಲ್ಲಿ ರಸ್ತೆ ಬದಿ ನಿಂತಿದ್ದ ತಮ್ಮ ಇನ್ನೋವಾರ ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ.

ಪರಿಣಾಮ ಇನ್ನೋವಾ ಕಾರಿನ ಮುಂಭಾಗ ಜಖಂಗೊಂಡಿದೆ. ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದಕ್ಕೆ ದಿಲೀಪ್‌ ರಿಪೇರಿ ಖರ್ಚು ಭರಿಸುವುದಾಗಿ ಹೇಳಿ ಸ್ಥಳದಿಂದ ತೆರಳಿದ್ದರು. ಇದೀಗ ಕಾರು ರಿಪೇರಿ ಮಾಡಿಸಿ ಕೊಡಲು ದಿಲೀಪ್‌ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ತಿಪ್ಪೇಸ್ವಾಮಿ ಎಂಬುವರು ಚಿಕ್ಕಪೇಟೆ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.

‘ಮಗಳು ಜಾನಕಿ’ ಮಂಗಳತ್ತೆ ಅಪಘಾತದಲ್ಲಿ ದುರ್ಮರಣ

ಇದಕ್ಕೆ ಪ್ರತಿ ದೂರು ಕೊಟ್ಟಿರುವ ನಟ ದಿಲೀಪ್‌ ಶೆಟ್ಟಿ, ಇನ್ನೋವಾ ಕಾರು ನನ್ನ ಐ20 ಕಾರಿಗೆ ಡಿಕ್ಕಿ ಹೊಡೆದಿದೆ. ಈ ಕುರಿತು ತನಿಖೆ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ದೂರು-ಪ್ರತಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.