ಚಿತ್ರ ವಿಮರ್ಶೆ: ರಂಗನಾಯಕಿ

‘ಮುಖದ ತುಂಬೆಲ್ಲಾ ಆತಂಕ, ಭಯಗಳನ್ನು ಹೊತ್ತು ರಂಗನಾಯಕಿ ಓಡುತ್ತಿದ್ದಾಳೆ. ಅವಳ ಹಿಂದಿನಿಂದ ನಾಯಿಗಳು ಬೊಗಳುವ ಸದ್ದು. ಆ ಸದ್ದಿಗೆ, ಅವು ಮಾಡಿವ ದಾಳಿಗೆ ಹೆದರಿ ಓಡುತ್ತಾ ಓಡುತ್ತಾ ಕಡೆಗೆ ಅಂತ್ಯ ತಲುಪಿ ಮುಂದೆ ಏನು ಮಾಡುವುದು ಎಂದು ತಿಳಿಯದೇ ಜೋರಾಗಿ ರೋಧಿಸುತ್ತಾಳೆ’ ಇದು ಆರಂಭದಲ್ಲಿ ರಂಗನಾಯಕಿಗೆ ಪದೇ ಪದೇ ಬೀಳುವ ಕನಸು.

Aditi Prabhudeva kannada movie ranganayaki film review

ಕೆಂಡಪ್ರದಿ

ಹೀಗೆ ಬಿದ್ದ ಕೆಟ್ಟ ಕನಸು ಒಂದು ಹಂತದಲ್ಲಿ ನನಸೂ ಆಗಿ, ಅದು ಮಾಡಿದ ಗಾಯದಿಂದ ನೊಂದು, ಗಾಯ ಮಾಡಿದವರ ವಿರುದ್ಧ ದಿಟ್ಟವಾಗಿ ಹೋರಾಟ ಮಾಡಿ ಗೆಲ್ಲುವಲ್ಲಿಗೆ ಚಿತ್ರ ಕೊನೆಯಾಗುತ್ತದೆ. ಅದರ ನಡುವಲ್ಲಿ ರಂಗನಾಯಕಿಯ ಧೈರ್ಯ, ಜೀವನ ಪ್ರೀತಿ, ದಿಟ್ಟ ಹೋರಾಟ, ಸಿಸ್ಟರ್ ಎಂದು ಹೇಳಿಕೊಳ್ಳುತ್ತಲೇ ಮಾಡುವ ಕಾಮುಖ ದಾಳಿ, ಅತ್ಯಾಚಾರಕ್ಕೊಳಗಾದವರನ್ನು ಸಮಾಜ ನೋಡುವ ಬಗೆ, ಅಬಲೆ ಹೆಣ್ಣು ಮಕ್ಕಳ ಸಂಕಟವೆಲ್ಲವೂ ಅನಾವರಣಗೊಳ್ಳುತ್ತದೆ.

ಮಾಡ್ರನ್ ನಾಯಕಿ ಹೇಳ್ತಿದ್ದಾಳೆ ದೆಹಲಿಯ ಕರಾಳ ಕಥೆ!

ರಂಗನಾಯಕಿ ಬಾಳಲ್ಲಿ ಎರಡು ಅಧ್ಯಾಯಗಳಿವೆ. ಒಂದರಲ್ಲಿ ಜೀವನೋತ್ಸಾಹ ತುಂಬಿದ ಚೆಲುವೆ. ಮತ್ತೊಂದರಲ್ಲಿ ತನಗಾದ ಅನ್ಯಾಯದ ವರುದ್ಧ ಸಿಡಿದೇಳುವ ದಿಟ್ಟೆ. ಇದೇ ರೀತಿ ಸಿನಿಮಾ ಎರಡು ಶೇಡ್‌ಗಳಲ್ಲಿ ಸಾಗುತ್ತಾ ಹೋಗುತ್ತದೆ. ಇಬ್ಬರು ನಾಯಕರು, ಅವರೊಳಗಿನ ದ್ವಿತ್ವ. ಬರುವ ಹಲವು ಪಾತ್ರಗಳಲ್ಲಿನ ಎರಡೆರಡು ಮುಖಗಳು ಚಿತ್ರದ ಮೇನ್ ಥೀಮ್.

ನಿರ್ಭಯಾ ಬದುಕಿದ್ದರೆ ಏನಾಗುತ್ತಿತ್ತು ಎಂಬ ಯೋಚನೆಯೇ 'ರಂಗನಾಯಕಿ'!

ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣದಿಂದ ಪ್ರೇರಣೆಗೊಂಡು, ಆಕೆ ಬದುಕಿದ್ದರೆ ಏನು ಮಾಡುತ್ತಿದ್ದಳು ಎನ್ನುವುದನ್ನು ಕಲ್ಪನೆ ಮಾಡಿಕೊಂಡು ನಿರ್ದೇಶಕ ದಯಾಳ್ ಪದ್ಮನಾಭನ್ ಈ ಕತೆ ಮಾಡಿಕೊಂಡಿದ್ದು, ಮೊದಲಿನಿಂದ ಕಡೆಯವರೆಗೂ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದ್ದಾರೆ. ಮೊದಲಾರ್ಧದಲ್ಲಿ ಕೊಂಚ ಬೋರಿಂಗ್ ಎನ್ನಿಸಿದರೂ ಕಡೆಯಾರ್ಧದಲ್ಲಿ ರಂಗನಾಯಕಿ ಪೂರ್ತಿಯಾಗಿ ನೋಡುಗನನ್ನು ಆವರಿಸಿಕೊಳ್ಳುತ್ತಾಳೆ. ಇದಕ್ಕೆ ಅತಿಥಿ ಪ್ರಭುದೇವ್ ನಟನೆ, ಮ್ಯಾನರಿಸಂ, ತ್ರಿವಿಕ್ರಮ್, ಶ್ರೀನಿ ಅವರ ಅಭಿನಯ, ಉಳಿದ ಪಾತ್ರಗಳ ಸಾಥ್ ಎಲ್ಲವೂ ಕಾರಣ. ನವೀನ್ ಕೃಷ್ಣ ಅವರ ಡೈಲಾಗ್‌ಗಳು ರಂಗನಾಯಕಿ ತಾಕತ್ತನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಯಶ ಕಂಡಿದೆ. ದಯಾಳ್ ಚಿತ್ರ ನಿರೂಪಣೆ ಸರಳವಾಗಿದ್ದರೂ ಹದವಾಗಿ ಸಾಗುತ್ತ
 

Latest Videos
Follow Us:
Download App:
  • android
  • ios