Wipe your tears, drink gripe water: BJP to HD Kumaraswamy

ಕುಮಾರಸ್ವಾಮಿ ಅಳುತ್ತಿದ್ದಾರೆಯೇ.. ಹಾಗಾದರೆ ಗ್ರೈಪ್ ವಾಟರ್ ಕುಡಿಸಿ!

ವೇದಿಕೆ ಮೇಲೆ ಕಣ್ಣೀರು ಹಾಕಿದ್ದ ಕುಮಾರಸ್ವಾಮಿ ಸಾಮಾಜಿಕ ತಾಣದಲ್ಲಿಯೂ ಟೀಕೆಗೆ ಗುರಿಯಾಗಿದ್ದರು. ಇನ್ನೊಂದು ಕಡೆ ಮಾಧ್ಯಮಗಳು ಪರ-ವಿರೋಧದ ಚರ್ಚೆ ಮಾಡಿದ್ದವು. ಆದರೆ ಇದೆಲ್ಲವನ್ನು ಮೀರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರಿಗೆ ಗ್ರೈಪ್ ವಾಟರ್ ಕಳುಹಿಸಿಕೊಟ್ಟಿದ್ದಾರೆ.

ಮಂಡ್ಯ[ಜು.19]  ಅಳುವ ಮುಖ್ಯಮಂತ್ರಿ ಎಂದು ಆಡಿಕೊಂಡಿರುವ ಮಂಡ್ಯದ ಬಿಜೆಪಿ ಮುಖಂಡರು ಸಿಎಂ ಕುಮಾರಸವಾಮಿಗೆ ಗ್ರೈಪ್ ವಾಟರ್  ಪಾರ್ಸಲ್ ಮಾಡಿದ್ದಾರೆ. ಅಳುವ ಮಕ್ಕಳನ್ನು ಸಮಾಧಾನ ಪಡಿಸಲು ಗ್ರೈಪ್ ವಾಟರ್ ನೀಡುವುದು ಸರ್ವೇ ಸಾಮಾನ್ಯ. ಮಂಜುನಾಥ ನೇತೃತ್ವದ ಬಿಜೆಪಿ ನಾಐಕರು 6 ಬಾಟಲ್ ಗ್ರೈಪ್ ವಾಟರ್ ನ್ನು ವಿಧಾನಸೌಧದ 3ನೇ ಮಹಡಿಯ ಕುಮಾರಸ್ವಾಮಿ ಕಚೇರಿಗೆ ಪಾರ್ಸಲ್ ಮಾಡಿದ್ದಾರೆ.