ವರ್ಲ್ಡ್ ಫೋಟೋಗ್ರಾಫಿ ಡೇ: 79 ರ ವಯಸ್ಸಿನಲ್ಲಿಯೂ ಫೋಟೋಗ್ರಫಿ ಮಾಡುವ ಅಬ್ದುಲ್ ಹಫೀಜ್!
ಇಂದು ವಿಶ್ವ ಛಾಯಚಿತ್ರದ ದಿನ. ಚಂದದ ಕ್ಷಣಗಳನ್ನು ಸೆರೆ ಹಿಡಿದು ನೆನಪಿನಲ್ಲಿಡುವಂತೆ ಮಾಡುವವರು ಇವರು. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಜೊತೆ ಖ್ಯಾತ ಫೋಟೋಗ್ರಾಫರ್ ಒಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು (ಆ. 19): ಇಂದು ವಿಶ್ವ ಛಾಯಚಿತ್ರದ ದಿನ. ಚಂದದ ಕ್ಷಣಗಳನ್ನು ಸೆರೆ ಹಿಡಿದು ನೆನಪಿನಲ್ಲಿಡುವಂತೆ ಮಾಡುವವರು ಇವರು. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಜೊತೆ ಖ್ಯಾತ ಫೋಟೋಗ್ರಾಫರ್ ಒಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಇವರ ಹೆಸರು ಅಬ್ದುಲ್ ಹಫೀಜ್. ಬೆಂಗಳೂರಿನವ ಶಿವಾಜಿನಗರದವರು. ಹಿಂದೂ, ಇಂಡಿಯನ್ ಎಕ್ಸ್ ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ದಿ ಟೈಮ್ಸ್, ಸಂಯುಕ್ತ ಕರ್ನಾಟಕ ಸೇರಿದಂತೆ ಸಾಕಷ್ಟು ಪ್ರಖ್ಯಾತ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಗಡಿನಾಡ ಗಾಂಧಿ ಅಬ್ದುಲ್ ಗಫಾರ್ ಖಾನ್, ರಷ್ಯಾ ದೇಶದ ರಾಜತಾಂತ್ರಿಕ ಕ್ರುಶ್ನೇವ್, ಇಂಗ್ಲೆಂಡಿನ ಮಹಾರಾಣಿ ಎಲಿಜಬೆತ್ ಹಾಗೂ ಪೋಪ್ ಜಾನ್ ಪಾಲ್ ಅವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಅಪರೂಪದ ವಸ್ತುಗಳು ಇವರ ಸಂಗ್ರಹಾಲಯದಲ್ಲಿದೆ.
ಅಬ್ದುಲ್ ಹಫೀಜ್ ರವರು ಸುವರ್ಣ ನ್ಯೂಸ್ ಜೊತೆ ತಮ್ಮ ಫೋಟೋಗ್ರಫಿ ಪಯಣವನ್ನು ಹಂಚಿಕೊಂಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.