Asianet Suvarna News Asianet Suvarna News

ಭ್ರಷ್ಟರಿಗೆ ಬಿಡ್ತಿರಲಿಲ್ಲ ಎತ್ತಲು ಹೆಡೆ: ಇವ್ರೇ ನಮ್ಮ ಸಂತೋಷ್ ಹೆಗ್ಡೆ!

Oct 26, 2018, 8:45 PM IST

ಬೆಂಗಳೂರು(ಅ.26): ಇವರ ಹೆಸರು ಕೇಳಿದೊಡೆ ಭ್ರಷ್ಟರ ಎದೆಯೊಮ್ಮೆ ಸಣ್ಣಗೆ ಕಂಪಿಸುತ್ತಿತ್ತು. ಇವರ ಧ್ವನಿ ಕೇಳಿದೊಡೆ ಜನರ ದುಡ್ಡು ತಿಂದು ತೇಗುತ್ತಿದ್ದವರು ಬಿಲ ಸೇರುತ್ತಿದ್ದರು. ಇವರೇ ಇಡೀ ಕರುನಾಡು ಮೆಚ್ಚಿದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಘನತೆ ಹೆಚ್ಚಿಸಿದ ನಿಷ್ಪಕ್ಷಪಾತ, ನಿರ್ಭಿಡೆಯ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ.

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಜೀವನ, ನ್ಯಾಯಮೂರ್ತಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ, ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರಾಗಿ ಭ್ರಷ್ಟಾಚಾರ ನಿರ್ಮೂಲನೆಯ ಪಣ ತೊಟ್ಟು ಅವರು ಕರ್ತವ್ಯ ನಿರ್ವಹಿಸಿದ ರೀತಿ ಇವೆಲ್ಲವುಗಳ ಕುರಿತು ಸಂತೋಷ್ ಹೆಗ್ಡೆ ಹಂಚಿಕೊಂಡ ಅನುಭವದ ಪೂರ್ಣ ಪಾಠ ನಿಮಗಾಗಿ....