ಕನ್ನಡದ ಪ್ರತಿಷ್ಠಿತ ದಿನಪತ್ರಿಕೆ ಕನ್ನಡಪ್ರಭ ಹೊರತಂದಿದ್ದ ಸಂತ ಸೇವಾಲಾಲ್ ಜಯಂತಿಯ ವಿಶೇಷ ಸಂಚಿಕೆಗೆ ಅಪಾರ ಜನಮನ್ನಣೆ ದೊರೆತಿದೆ. ಇದೇ ಮೊದಲ ಸಾರಿ ವಿಶೇಷ ಸಂಚಿಕೆಯೊಂದು 2ನೇ ಮುದ್ರಣಕ್ಕೆ ಹೋಗುತ್ತಿದೆ.
ಬೆಂಗಳೂರು[ಫೆ.20] ಕನ್ನಡಪ್ರಭದ ವಿಶೇಷ ಸಂಚಿಕೆ ಸಂತ ಸೇವಾಲಾಲರ ಜೀವನ ಸಾಧನೆ, ಇತಿಹಾಸ ಎಲ್ಲವನ್ನು ಸಂಚಿಕೆ ಸುಂದರವಾಗಿ, ಸ್ಫುಟವಾಗಿ ನಿಮ್ಮ ಮುಂದೆ ಕಟ್ಟಿಕೊಡುತ್ತದೆ. ಬಂಜಾರ ಸಮುದಾಯದ ಆಚರಣೆ, ಜಾತ್ರೆ, ಪರಂಪರೆ, ವೇಷ-ಭೂಷಣ, ವೈವಿಧ್ಯತೆ ಸೇರಿದಂತೆ ನಮಗೆ ಗೊತ್ತಿಲ್ಲದ ಅನೇಕ ವಿಚಾರಗಳ ಪರಿಚಯವಾಗುತ್ತ ಹೋಗುತ್ತದೆ.
ಬಂಜಾರ ಸಮುದಾಯಕ್ಕೆ ಸಂಬಂಧಿಸಿದ ಪ್ರವಾಸಿ ತಾಣಗಳು, ಧಾರ್ಮಿಕ ಪರಂಪರೆ, ಆಧುನಿಕ ಸಮಾಜದೊಂದಿಗಿನ ಹೊಂದಾಣಿಕೆ, ರಾಜಕಾರಣದಲ್ಲಿ ಸಮುದಾಯದ ಸಾಧನೆ ಹೆಜ್ಜೆ ಎಲ್ಲ ವಿಚಾರಗಳನ್ನು ಈ ಸಂಚಿಕೆ ನಿಮ್ಮ ಕೈನಲ್ಲಿ ಇಡುತ್ತದೆ.
ಲೋಕಾ ಪೇದೆ ಬರೆದ ಪುಸ್ತಕ ಲೋಕಾಯುಕ್ತರಿಂದ ಬಿಡುಗಡೆ
ಸಂತ ಸೇವಾಲಾಲರ ವಿಶೇಷ ಸಂಚಿಕೆಯ ಪರಿಕಲ್ಪನೆ ಮತ್ತು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಸಹಾಯಕ ಸಂಪಾದಕ ವಿನೋದ್ ಕುಮಾರ್ ಬಿ ನಾಯ್ಕ್ ಸಂಚಿಕೆ ವಿವರಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದಾರೆ.
"
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 20, 2019, 9:00 PM IST