ರೈಡ್ ಮಾಡಲೇಬಾರದ ವ್ಯಕ್ತಿ ಬೈಕಲ್ಲೇ ನಾಲ್ಕು ದೇಶ ಸುತ್ತಿದ
ಬರೋಬ್ಬರಿ ನಲವತ್ತು ದಿನಗಳು, ನಾಲ್ಕು ದೇಶಗಳ ಸುತ್ತಾಟ, 10500 ಕಿಮೀ. ಏಕಾಂಗಿ ಬೈಕ್ ರೈಡಿಂಗ್ ಮಾಡಿ ಬಂದಿರುವ ನರೇನ್ ತಮ್ಮ ಯಾನದ ಇಂಟರೆಸ್ಟಿಂಗ್ ಸನ್ನಿವೇಶಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
ಬೈಕ್ ರೈಡಿಂಗ್ ಹವ್ಯಾಸವಾಗಿದ್ದ ನರೇನ್ ರಾಜ್ ಅವರಿಗೆ ಇದ್ದಕ್ಕಿದ್ದ ಹಾಗೆ ಆಕ್ಸಿಡೆಂಟ್ ಆಗಿ ಬಿಡುತ್ತದೆ. ಬಲಗಾಲು ಸ್ಟೆಬಿಲಿಟಿ ಕಳೆದುಕೊಂಡು ಡಾಕ್ಟರ್ ಸಹಿತ ಎಲ್ಲರೂ ಮುಂದೆ ಬೈಕ್ ರೈಡ್ ಮಾಡಬೇಡಿ. ಇದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಸಲಹೆ ನೀಡುತ್ತಾರೆ. ಆದರೆ ಬೈಕ್ ಮೂಲಕವೇ ವಿಶ್ವ ಸುತ್ತಬೇಕು ಎಂದು ಕನಸು ಕಂಡ ಇವರಿಗೆ ಈ ಆಘಾತದಿಂದ ಮನಸ್ಸು ಘಾಸಿಯಾಗುತ್ತದೆ. ಆದರೂ ನನ್ನ ಕನಸನ್ನು ಪೂರ್ತಿ ಮಾಡಿಕೊಳ್ಳಲೇ ಬೇಕು. ಬಂದದ್ದು ಬರಲಿ ಎಂದು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಮಯನ್ಮಾರ್, ಭೂತಾನ್, ನೇಪಾಳ, ಥೈಲ್ಯಾಂಡ್ ದೇಶ ಪರ್ಯಟನೆಗೆ ಹೊರಟೇಬಿಟ್ಟರು ಈ ಬೆಂಗಳೂರಿನ ಸಾಹಸಿ. ಬರೋಬ್ಬರಿ ನಲವತ್ತು ದಿನಗಳು, ನಾಲ್ಕು ದೇಶಗಳ ಸುತ್ತಾಟ, 10500 ಕಿಮೀ. ಏಕಾಂಗಿ ಬೈಕ್ ರೈಡಿಂಗ್ ಮಾಡಿ ಬಂದಿರುವ ನರೇನ್ ತಮ್ಮ ಯಾನದ ಇಂಟರೆಸ್ಟಿಂಗ್ ಸನ್ನಿವೇಶಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.