ಚಿಕ್ಕ ವಯಸ್ಸಿನಲ್ಲಿಯೇ ಸೇನೆ ಸೇರಬೇಕೆನ್ನುವ ಈ ಪೋರನಿಗೆ ಸೆಲ್ಯೂಟ್..!

ದರ್ಶನ್ ಡೈಲಾಗ್ಸ್ ಅನ್ನೋ ಪಟ ಪಟ ಅಂತ ಹೇಳೋ ಈ ಪುಟಾಣಿಗೆ ಸಿನಿಮಾ ಸ್ಟಾರ್ ಆಗೋ ಆಸೆಯಂತೆ.

First Published Nov 15, 2018, 7:10 PM IST | Last Updated Nov 15, 2018, 7:10 PM IST

ದರ್ಶನ್ ಡೈಲಾಗ್ಸ್ ಅನ್ನೋ ಪಟ ಪಟ ಅಂತ ಹೇಳೋ ಈ ಪುಟಾಣಿಗೆ ಸಿನಿಮಾ ಸ್ಟಾರ್ ಆಗೋ ಆಸೆಯಂತೆ. ಹಾಡು, ಪೈಂಟಿಂಗ್, ಮೋನೋ ಆ್ಯಕ್ಟಿಂಗ್ ನಲ್ಲಿಯೂ ತನ್ನ ಜಾಣತನವನ್ನು ತೋರಿಸೋ ಈ ಪುಟಾಣಿಗೊಂದು ಗಂಭೀರ ಚಿಂತನೆಯೂ ಇದೆ. ಕಿರಣ್ ಇಂಗ್ಲಿಷ್ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿರುವ ಬಾಲಕನಿಗೆ ಭಾರತೀಯ ಸೇನೆ ಸೇರೋ ಆಸೆಯಂತೆ. ಹುಟ್ಟುವಾಗಲೇ ಎಂಜಿನೀಯರ್, ಡಾಕ್ಟರ್ ಆಗಬೇಕೆಂದು ತಲೆಯಲ್ಲಿ ಪೋಷಕರು ತುಂಬಿರುತ್ತಾರೆ. 

ಬಹುತೇಕ ಮಕ್ಕಳೂ ದೊಡ್ಡವರಾದ ಮೇಲೆ ಏನಾಗಬೇಕೆಂದು ಕೇಳಿದರೆ ಅದನ್ನೇ ಹೇಳುತ್ತಾರೆ. ಆದರಿನ್ನೂ ಹಾಲು ಹಲ್ಲು ಉದುರಿದ ಧನುಶ್ ಮಾತ್ರ ಆಗಲೇ ದೇಶ, ರಕ್ಷಣೆ ಎಂಬ ನಿಟ್ಟಿನಲ್ಲಿ ಯೋಚಿಸುತ್ತಿದ್ದಾನೆ. ಬಾಲ್ಯ, ಮುಗ್ಧತೆಯನ್ನು ಕಳೆದುಕೊಳ್ಳದ ಈ ಬಾಲಕ ಮುಂದೆ ಏನಾಗುತ್ತಾನೋ ಗೊತ್ತಿಲ್ಲ. ಆದರೆ, ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಸೇನೆ ಸೇರಬೇಕೆಂದು ಹೇಳುತ್ತಿರುವುದು ಮಾತ್ರ ನಿಜಕ್ಕೂ ಆಶ್ಚರ್ಯ. ಈ ಪುಟ್ಟ ಪೋರನಿಗೆ ಸೆಲ್ಯೂಟ್...