ಈತನ ಹೆಸರು ಅರ್ಜುನ, ಮಹಾಭಾರತದ ಪಾರ್ಥನಂತೆ ಸಕಲ ಕಲಾ ವಲ್ಲಭ..!

ಈತನ ಹೆಸರು ಅರ್ಜುನ. ಮಹಾಭಾರತದ ಪಾರ್ಥನಂತೆ ಸಕಲ ಕಲಾ ವಲ್ಲಭ. ಇನ್ನೂ ಆರೂವರೆ ವರ್ಷದ ಈ ಪೋರನ ಕೌಶಲ್ಯದ ಬಗ್ಗೆ ಕೇಳಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ.

First Published Nov 14, 2018, 10:00 PM IST | Last Updated Nov 14, 2018, 10:00 PM IST

ಈತನ ಹೆಸರು ಅರ್ಜುನ. ಮಹಾಭಾರತದ ಪಾರ್ಥನಂತೆ ಸಕಲ ಕಲಾ ವಲ್ಲಭ. ಇನ್ನೂ ಆರೂವರೆ ವರ್ಷದ ಈ ಪೋರನ ಕೌಶಲ್ಯದ ಬಗ್ಗೆ ಕೇಳಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ. ಬೆಂಗಳೂರಿನ ಶಾಂತಿನಗರದಲ್ಲಿರೋ ಈ ತುಂಟನನ್ನು ಹಿಡಿಯುವುದೇ ಕಷ್ಟ.  

ಕಾರು ಡ್ರೈವಿಂಗ್ ಮಾಡುವ ಈ ಪೋರನಿಗೆ ಬೈಕ್ ರೈಡಿಂಗೂ ಗೊತ್ತು. ಮಲ್ಲಗಂಬ ವಿದ್ಯೆಯೂ ಗೊತ್ತಿದ್ದು, ಕಂಬವನ್ನು ಸರ ಸರ ಕ್ಷಣ ಮಾತ್ರದಲ್ಲಿ ಹತ್ತಬಲ್ಲ.  ಜಿಮ್ನಾಸ್ಟಿಕ್, ಸ್ವಿಮ್ಮಿಂಗ್‌ನಲ್ಲೂ ಈತನದ್ದು ಎತ್ತಿದ ಕೈ. ಜಿಮ್ನಾಸ್ಟಿಕ್ ಗೊತ್ತು, ಸ್ಕೇಟಿಂಗ್ ಗೊತ್ತಿಲ್ಲದೇ ಇರುತ್ತಾ? ಅದರಲ್ಲಿಯೂ ಈ ಅರ್ಜುನ ಮಾಸ್ಟರ್. ಸಕಲ ವಿದ್ಯಾ ಪಾರಂಗತನಾದ ಈ ಲಿಟಲ್ ಮಾಸ್ಟರ್ ಅರ್ಜುನ್‌ಗೆ ಸಲಾಂ ಎನ್ನಲೇಬೇಕು.