ಪುರಾಣ ಕಥೆಗಳು ಈ ಹುಡುಗಿಗೆ ಬಲು ಸಲೀಸು; ಅದನ್ನು ಕೇಳುವುದೇ ಸೊಗಸು!

ಈ ಮುದ್ದು ಪುಟಾಣಿಯ ಹೆಸರು ಸಾಯಿ ಕೀರ್ತನಾ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗೆಯ ಪಕ್ಕದಲ್ಲಿರುವ ಉಂಬಳೆಬೈಲು ಎಂಬ ಪುಟ್ಟ ಊರಿನ ಕುವರಿ ಈಕೆ.  ಶುಭಾ-ರಾಜೇಂದ್ರ ದಂಪತಿಯ ಮುದ್ದು ಮಗಳು.ಈಕೆಯ ಬಾಯಲ್ಲಿ ಪುರಾಣ ಕತೆಗಳನ್ನು ಕೇಳುವುದೇ ಒಂದು ಸೊಗಸು. ಮಲೆನಾಡಿನ ಕವಿ ಶ್ರೀನಿವಾಸ ಉಡುಪ ಅವರ ಕವನ ಕುಂಭಕರ್ಣನ ನಿದ್ದೆ  ಹೇಗಿತ್ತು ಅಂತ ಕೀರ್ತನಾ ಹೇಳೋದು ಕೇಳಿ. 

First Published Nov 14, 2018, 10:02 AM IST | Last Updated Nov 14, 2018, 10:03 AM IST

ಈ ಮುದ್ದು ಪುಟಾಣಿಯ ಹೆಸರು ಸಾಯಿ ಕೀರ್ತನಾ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗೆಯ ಪಕ್ಕದಲ್ಲಿರುವ ಉಂಬಳೆಬೈಲು ಎಂಬ ಪುಟ್ಟ ಊರಿನ ಕುವರಿ ಈಕೆ.  ಶುಭಾ-ರಾಜೇಂದ್ರ ದಂಪತಿಯ ಮುದ್ದು ಮಗಳು.ಈಕೆಯ ಬಾಯಲ್ಲಿ ಪುರಾಣ ಕತೆಗಳನ್ನು ಕೇಳುವುದೇ ಒಂದು ಸೊಗಸು. ಮಲೆನಾಡಿನ ಕವಿ ಶ್ರೀನಿವಾಸ ಉಡುಪ ಅವರ ಕವನ ಕುಂಭಕರ್ಣನ ನಿದ್ದೆ  ಹೇಗಿತ್ತು ಅಂತ ಕೀರ್ತನಾ ಹೇಳೋದು ಕೇಳಿ. 

ಜಾನಿ ಜಾನಿ ಎಸ್​ ಪಾಪ ಎಂದು ಹೇಳುವ ಮಕ್ಕಳೇ ಇರುವ ಈ ಕಾಲದಲ್ಲಿ ಅಚ್ಚ ಕನ್ನಡದ ಕವಿತೆಗಳನ್ನು ಮುದ್ದಾಗಿ, ಆದ್ರೆ ಸ್ಪಷ್ಟವಾಗಿ ಹೇಳುವ ಕೀರ್ತನಾಗೆ ಇನ್ನೂ ಏಳು ವರ್ಷವೂ ತುಂಬಿಲ್ಲ. ಸಣ್ಣ ತರಲೆ, ತುಂಟತನ ಮಾಡುತ್ತಾ ಆಟವಾಡುತ್ತಾ ಇರುವ ಕೀರ್ತನಾ ಅರಳು ಹುರಿದಂತೆ ಮಾತಾಡುವ ಚಿನಕುರಳಿ. ಕವನ ಹೇಳಲು ಪ್ರಾರಂಭಿಸಿದ್ರೆ ಕೇಳುಗರೆಲ್ಲಾ ಗಪ್​ಚುಪ್​.. ಶಿವಮೊಗ್ಗದ ಸಾಹಿತಿ ರಾಮಮೂರ್ತಿ ತೆಮೆಮನೆಯವರ ಕವನ ಅಳಿಲಿನ ಸೇವೆ ಕೀರ್ತನಾಳ ಬಾಯಲ್ಲಿ ಎಷ್ಟು ಚೆಂದ ಕೇಳುತ್ತದೆ ನೀವೇ ನೋಡಿ..