Asianet Suvarna News Asianet Suvarna News

ಲಾಕ್‌ಡೌನ್ ಎಫೆಕ್ಟ್: ಬಂಧಿಯಾದ ಜನ, ಪ್ರಾಣಿ, ಪಕ್ಷಿಗಳು ಫ್ರೀ..!

ಭಾರತದಲ್ಲಿ ಕಂಪ್ಲೀಟ್‌ ಲಾಕ್‌ಡೌನ್ ಮಾಡಿದ್ದು, ಜನ ಮನೆಯೊಳಗೆ ಬಂಧಿಯಾಗಿದ್ದಾರೆ. ಆದರೆ ಜನರ ಅಬ್ಬರ, ಆಡಂಬರಕ್ಕೆ ಅಡಗಿ ಕುಳಿತಿದ್ದ ಪ್ರಾಣಿ, ಪಕ್ಷಿಗಳು ಮೆಲ್ಲನೆ ಹೊರಗಿಣುಕುತ್ತಿವೆ. ಲೋಹದ ಹಕ್ಕಿಗಳು ಹಾರುತ್ತಿದ್ದ ಬಾನಲ್ಲಿ ಜೀವಂತ ಪಕ್ಷಿಗಳು ರೆಕ್ಕೆ ಬೀಸುತ್ತಿವೆ. ಮನುಷ್ಯ ಆವರಿಸಿದ್ದ ಪ್ರಕೃತಿ ನಿಸರ್ಗ ಜೀವಿಗಳಿಗೆ ತೆರೆದುಕೊಂಡಿದೆ.

lesson for human being to be coexist with nature
Author
Bangalore, First Published Mar 27, 2020, 8:46 AM IST

ಭಾರತದಲ್ಲಿ ಕಂಪ್ಲೀಟ್‌ ಲಾಕ್‌ಡೌನ್ ಮಾಡಿದ್ದು, ಜನ ಮನೆಯೊಳಗೆ ಬಂಧಿಯಾಗಿದ್ದಾರೆ. ಆದರೆ ಜನರ ಅಬ್ಬರ, ಆಡಂಬರಕ್ಕೆ ಅಡಗಿ ಕುಳಿತಿದ್ದ ಪ್ರಾಣಿ, ಪಕ್ಷಿಗಳು ಮೆಲ್ಲನೆ ಹೊರಗಿಣುಕುತ್ತಿವೆ. ಲೋಹದ ಹಕ್ಕಿಗಳು ಹಾರುತ್ತಿದ್ದ ಬಾನಲ್ಲಿ ಜೀವಂತ ಪಕ್ಷಿಗಳು ರೆಕ್ಕೆ ಬೀಸುತ್ತಿವೆ. ಮನುಷ್ಯ ಆವರಿಸಿದ್ದ ಪ್ರಕೃತಿ ನಿಸರ್ಗ ಜೀವಿಗಳಿಗೆ ತೆರೆದುಕೊಂಡಿದೆ.

ಸಾಮಾನ್ಯ ದಿನಗಳಲ್ಲಿ ನಗರ ಹೇಗಿರುತ್ತದೆ ಎಂಬ ಚಿತ್ರಣ ಹೊರಗೆ ಓಡಾಡುವ ಎಲ್ಲ ಜನರಿಗೂ ಇರುತ್ತದೆ. ಆಫೀಸ್, ಸ್ಕೂಲ್, ಕಾಲೇಜಿಗೆ ಹೋಗುವ ಧಾವಂತದ ಜನ. ಸಮಯಕ್ಕೆ ಸರಿಯಾಗಿ ತಲುಪಬೇಕೆಂಬ ಗಡಿಬಿಡಯಲ್ಲಿ ಕರ್ಕಶ ಹಾರ್ನ್ ಹಾಕುತ್ತಾ ಭರ್ರನೆ ಸಾಗುವ ವಾಹನಗಳು, ಇವೆಲ್ಲದರ ನಡುವೆ ನಮ್ಮ ಸುತ್ತ ಮುತ್ತ ನಮ್ಮಂತೆಯೇ ಬದುಕಲು ಹಕ್ಕಿರುವ ನೈಸರ್ಗಿಕ ಜೀವರಾಶಿಯ ಬಗ್ಗೆ ಮನುಷ್ಯ ಮರೆತೇ ಬಿಟ್ಟಿದ್ದಾನೆ. ಅದನ್ನು ನೆನಪಿಸುತ್ತಿರುವುದು ಕಣ್ಣಿಗೆ ಕಾಣದ ಒಂದು ವೈರಸ್.

ಮನೆಯೊಳಗೆ ಬಂಧಿಯಾದ ಮನುಜ, ಪ್ರಾಣಿ ಪಕ್ಷಿಗಳ ಸ್ವಚ್ಛಂದ ವಿಹಾರ!

ಪಕ್ಷಿ, ಪ್ರಾಣಿಗಳನ್ನು ಕಂಡರೆ ಅದು ಪ್ರಾಣಿ ಸಂಗ್ರಹಾಲಯದ ಬಂಧನದಲ್ಲಿ ಮಾತ್ರ. ಅವುಗಳೆಲ್ಲಾದರೂ ಹೊರಗೆ ಕಂಡರೆ ಅದು ಅಕ್ಷಮ್ಯ ಅಪರಾಧ ಎಂಬತಿರುತ್ತದೆ ಜನರ ಸಮಾನ್ಯ ರಿಯಾಕ್ಷನ್. ಆದರೆ ಕೊರೋನಾ ಭೀತಿಯಿಂದ ಮನುಷ್ಯನ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಿದೆ. ಪ್ರಾಣಿಗಳನ್ನು ಸರಳುಗಳ ನಡುವೆ ನೋಡಿ ಆನಂದಿಸುತ್ತಿದ್ದವರು ಮನೆಯ ಕಿಟಕಿಯ ಸರಳುಗಳನ್ನು ಹಿಡಿದು ಹೊರಗಿಣುಕುತ್ತಿದ್ದಾರೆ.

"

ಬೆಂಗಳೂರಿನಲ್ಲಿಯೂ ಪಾರ್ಕ್‌ಗಳಿದ್ದರೂ ಅಲ್ಲಿಯೂ ಸಣ್ಣ ಪುಟ್ಟ ಜೀವಿ ಸ್ವಚ್ಛಂದವಾಗಿರುವುದಕ್ಕೆ ಮನುಷ್ಯ ಬಿಡಲಿಲ್ಲ. ವೀಕೆಂಡ್‌ನಲ್ಲಿ ಕಾಲಿಡಲು ಕಷ್ಟ ಎಂಬಷ್ಟು ಜನ ಪಾರ್ಕ್‌ನಲ್ಲಿ. ಅವರ ಕಿರುಚಾಟ, ಹಾಡು, ನೃತ್ಯ, ಫ್ಯಾಮಿಲಿ ಪಿಕ್‌ನಿಕ್‌ನ ಭರಾಟೆಯಲ್ಲಿ ಪುಟ್ಟ ಜೀವಿಗಳು ಅಡಗಿ ಕೂರಬೇಕು.

ಆದರೆ ಈಗ ಎಲ್ಲವೂ ವ್ಯತ್ಯಸ್ತ. ಪ್ರಾಣಿ, ಪಕ್ಷಿಗಳು ಸ್ವಚ್ಛಂದವಾಗಿ ಓಡಾಡುತ್ತಿದೆ. ಒಡಿಶಾದ ಬೀಚ್‌ಗಳಲ್ಲಿ ಹಿಂದೆಂದೂ ಬರದಷ್ಟು ಕಡಲಾಮೆಗಳು ತೀರಕ್ಕೆ ಆಗಮಿಸಿವೆ. ಚೀನಾದಲ್ಲಿ ಕಡಲಲ್ಲಿ ಸೃಷ್ಟಿಯಾಗುತ್ತಿದ್ದ ಮಾಲೀನ್ಯ  ಬಹಳಷ್ಟು ಕಡಿಮೆಯಾಗಿದೆ. ಹಡಗುಗಳ ಅಬ್ಬರದಿಂದ ಆಳದಲ್ಲಿ ಅಡಗಿದ್ದ ಡಾಲ್ಫಿನ್‌ಗಳು ತೆರೆಯ ಮೇಲೆ ಜಿಗಿದಾಡುತ್ತಿವೆ. ಹಂಸಗಳು ಆರಾಮವಾಗಿ ಈಜಾಡುತ್ತಿವೆ. ಮನಷ್ಯ ಅಸಹಜತೆ ಎಂದು ಸಂಕಟಪಡುತ್ತಿರುವಾಗಲೇ, ಪ್ರಕೃತಿ ಸಹಜತೆಯತ್ತ ಮರಳುತ್ತಿದೆ. 

Follow Us:
Download App:
  • android
  • ios