ನ್ಯೂಯಾರ್ಕ್(ಫೆ. 15)  ಯೂ ಟ್ಯೂಬ್ ಸ್ಟಾರ್ ಜಸ್ಟಿನ್ ಬೈಬರ್ ತಮ್ಮ ಸೆಕ್ಸ್  ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೆಲ್ಲಿ ಬಾಲ್ಡಿನ್ ಜತೆಗಿನ ಖಾಸಗಿ ವಿಚಾರಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.

ಜಸ್ಟೀನ್ ಬೈಬರ್ ಮತ್ತು ಹೈಲೆ ಬಾಡ್ವಿನ್ ಇಬ್ಬರು ಅಪ್ಪಟ ಪ್ರೇಮಿಗಳು. 2018ರಲ್ಲಿ ಎಂಗೇಜ್ ಆದ ಜೋಡಿ ಅದೇ ವರ್ಷ ಮದುವೆಯಾಯಿತು. ಚೇಂಜಸ್ ಎಂಬ ಯುಟ್ಯೂಬ್ ಡಾಕ್ಯುಮೆಂಟ್ ಸೀರಿಸ್ ನಿಂದ ಮನೆ ಮಾತಾಗಿದ್ದು ಇದೇ ಬೈಬರ್. ಮದುವೆಯಾದ ಹೊಸತರಲ್ಲಿ ಹೊಂದಾಣಿಕೆ ಕಾಣದಿದ್ದರೂ ಕೊನೆಯದಾಗಿ ಒಬ್ಬರನ್ನೊಬ್ಬರು ನೆಚ್ಚಿಕೊಂಡರು.

ದಾಂಪತ್ಯದಲ್ಲಿ ಸೆಕ್ಸ್ ಇಲ್ಲದಿದ್ದರೂ ಸುಖ ಜೀವನ ನಡೆಸಬಹುದಾ?

ನಾನು ಮತ್ತು ನನ್ನ ಹೆಂಡತಿ ಇಡೀ ದಿನ ಏನು ಮಾಡುತ್ತಾರೇ ಎಂದು ಭಾವಿಸುತ್ತಿರೋ... ನಾವು ಸಖತ್ ಮಜಾ ಮಾಡುತ್ತೇವೆ. ಕ್ರೇಜಿ ಸಂಗತಿಗಳನ್ನು ಅನುಭವಿಸುತ್ತೇವೆ.  ನಾವು ಈ ಸಂದರ್ಭದಲ್ಲಿ ಮೂವಿಗಳನ್ನು ನೋಡಲು ಇಷ್ಟಪಡುತ್ತೇವೆ. ನೆಟ್ ಫ್ಲಿಕ್ಸ್ ನಮ್ಮ ನೆಚ್ಚಿನ ಸಂಗಾತಿಯಾಗುತ್ತದೆ. ಚಿಲ್ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಪ್ರತಿದಿನವನ್ನು ಸಂಭ್ರಮಿಸುವ ಪರಿಪಾಠ ಬೆಳಸಿಕೊಂಡಿದ್ದೇವೆ. ನಿನ್ನೆಗಿಂತ ಇಂದು ಚೆನ್ನ ಎಂದು ಬದುಕುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.