ಭಾರತದ ಶೇ. 47.8 ರಷ್ಟು ಮಹಿಳೆಯರು ಗರ್ಭ ನಿರೋಧಕ ವಿಧಾನದ ಬಗ್ಗೆ ತಿಳಿದಿದ್ದಾರೆ. ಇನ್ನುಳಿದವರಿಗೆ ಈ ಬಗ್ಗೆ ತಿಳಿವಳಿಕೆ ಇಲ್ಲ ಎಂದು ಸಮೀಕ್ಷೆಗಳು ಹೇಳುತ್ತವೆ. ಹಾಗಾದರೆ ಗರ್ಭ ತಡೆಗೆ ಇರುವ ಮಾರ್ಗಗಳು ಯಾವವು?

1.ಮಾತ್ರೆ: ಗರ್ಭನಿರೋಧಕ ಮಾತ್ರೆಗಳು ವಿವಿಧ ಹೆಸರಿನಲ್ಲಿ ಮಾರುಕಟ್ಟೆಯಲ್ಲಿವೆ. ಮಹಿಳೆಯರ ಹಾರ್ಮೋನ್ ಮೇಲೆ ಪರಿಣಾಮ ಬೀರುವ ಇದು ಬೇಡದ ಗರ್ಭ ತಡೆಯುತ್ತದೆ. ಆದರೆ ಇದರ ಸೈಡ್ ಎಫೆಕ್ಟ್ ಅನುಭವಿಸಲು ಮಹಿಳೆಯರು ಸಿದ್ಧರಾಗಿರಬೇಕು.

2. ವಂಕಿ: ಇದೊಂದು ರೀತಿಯ ರಿಂಗ್ ನಂತೆ ಇದ್ದು ಮಹಿಳೆಯರ ಯೋನಿಯೊಳಗೆ ವೈದ್ಯರ ಮೂಲಕವೇ ಇನ್ ಸರ್ಟ್ ಮಾಡಲಾಗುತ್ತದೆ. ಇಲ್ಲಿ ಸೈಡ್ ಎಫೆಕ್ಟ್ ಗೆ ಜಾಗ ಇಲ್ಲ.

3. ಚುಚ್ಚುಮದ್ದು: ಕೆಲ ತಿಂಗಳು ಪ್ರಭಾವ ಬೀರುವಂತಹ ಅಂದರೆ ಗರ್ಭ ತಡೆಯುವಂತಹ ಚುಚ್ಚುಮದ್ದುಗಳನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಮಾತ್ರೆಗೆ ಹೋಲಿಸಿದರೆ ಇದು ಉತ್ತಮ ಎಂಬುದು ವೈದ್ಯರ ಅಭಿಪ್ರಾಯ

4. ಕಾಪರ್ ಟಿ: ಆಂಗ್ಲ ಭಾಷೆಯ ಟಿ ಆಕಾರದ ವಸ್ತುವೊಂದನ್ನು ಮಹಿಳೆಯರ ಗರ್ಭಾಶಯದ ಸಮೀಪ ಇನ್ ಸರ್ಟ್ ಮಾಡಲಾಗುತ್ತದೆ. 12 ವರ್ಷಗಳ ಕಾಲ ಬೇಡದ ಗರ್ಭ ತಡೆಯುವ ಶಕ್ತಿ ಇವು ಹೊಂದಿವೆ.