Asianet Suvarna News Asianet Suvarna News

ಗುಡ್ ಟೈಮ್ಸ್: ಆಂಗ್ಲ ಪತ್ರಿಕೋದ್ಯಮದಲ್ಲಿ ಕನ್ನಡದ ನಕ್ಷತ್ರ ಸಿದ್ದರಾಜು!

 ಪತ್ರಿಕಾ ರಂಗದ ದಿಗ್ಗಜರಲ್ಲೊಬ್ಬರು ಸಿದ್ದರಾಜು! ಸಿದ್ದರಾಜು ಪಿಟಿಐ ವಾರ್ತಾ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆ ಅನನ್ಯ! ಸಿದ್ದರಾಜು ಹುಡುಕಿಕೊಂಡು ಬಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನ   

ಪತ್ರಿಕಾ ರಂಗದ ದಿಗ್ಗಜರಲ್ಲಿ ಸಿದ್ದರಾಜು ಕೂಡ ಒಬ್ಬರು. 1978ರಲ್ಲಿ ಪತ್ರಿಕಾ ರಂಗಕ್ಕೆ ಕಾಲಿಟ್ಟ ಸಿದ್ದರಾಜು ಸತತ ನಾಲ್ಕು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಟಿಐ ವಾರ್ತಾ ಸಂಸ್ಥೆಯ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಸಿದ್ದರಾಜು, 37 ವಷರ್ಷಗಳ ಕಾಲ ವರದಿಗಾರ, ಮುಖ್ಯ ವರದಿಗಾರ, ಕರ್ನಾಟಕ ವಿಭಾಗದ ಮುಖ್ಯಸ್ಥರಾಗಿ ಮತ್ತು ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಪತ್ರಿಕಾ ರಂಗಕ್ಕೆ ಇವರ ಸೇವೆ ಗುರುತಿಸಿ ಹಿಂದಿನ ಕಾಂಗ್ರೆಸ್ ಸರ್ಕಾರ, ಸಿದ್ದರಾಜು ಅವರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಸಿದ್ದರಾಜು ಸಾಧನೆ, ಪತ್ರಿಕಾ ರಂಗದಲ್ಲಿ ಅವರು ಸಲ್ಲಿಸಿದ ಸೇವೆ, ಅವರು ಮನಗಂಡಂತೆ ಪತ್ರಿಕೋದ್ಯಮದ ಇಂದಿನ ಸ್ಥಿತಿಗತಿ ಕುರಿತು ಅವರಿಂದಲೇ ಕೇಳಿ.
 

Video Top Stories