Asianet Suvarna News Asianet Suvarna News

ಇಲ್ಲಿದೆ ವಿಶ್ವದ ಅತ್ಯಂತ 10 ದುಬಾರಿ ವಾಚ್-ಒಂದು ವಾಚ್ ಬೆಲೆ 405 ಕೋಟಿ!

ವಿಶ್ವದಲ್ಲಿರೋ ಅತ್ಯಂತ ದುಬಾರಿ ವಾಚ್ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 405 ಕೋಟಿ ರೂಪಾಯಿ. ಈ ದುಬಾರಿ ವಾಚ್‌ನಲ್ಲಿ ಏನಿದೆ? ಇದೇ ರೀತಿ ದಾಖಲೆಯ ಬೆಲೆಗೆ ಮಾರಾಟವಾಗಿರುವ ಹಾಗೂ ಹರಾಜಾಗಿರುವ 10 ವಾಚ್‌ಗಳ ವಿವಿರ ಇಲ್ಲಿದೆ.

Top 10 most expensive watches in the world
Author
Bengaluru, First Published Oct 12, 2018, 3:26 PM IST

ಬೆಂಗಳೂರು(ಅ.12): ವಾಚ್ ಕಟ್ಟಿಕೊಳ್ಳೋದು ಸಮಯ ನೋಡಲು ಅನ್ನೋ ಕಾಲ ಹೋಗಿದೆ. ಇದೀಗ ವಾಚ್ ಕೂಡ ಫ್ಯಾಶನ್.  ಡ್ರೆಸ್ಸಿಗೆ ತಕ್ಕಂತೆ ವಾಚ್, ಬ್ರಾಂಡೆಡ್, ದುಬಾರಿ ವಾಚ್. ಹೀಗೆ ಹಲವು ವಾಚ್‌ಗಳು ನಿಮಗೆ ಹೊಸ ಮೆರುಗನ್ನ ನೀಡುತ್ತೆ. 

1571ರಲ್ಲೇ ಕೈಗೆ ವಾಚ್ ಕಟ್ಟೋ ಸಂಸ್ಕೃತಿ ಆರಂಭಗೊಂಡಿತ್ತು. 16ನೇ ಶತಮಾನದಲ್ಲಿ ಇಂಗ್ಲೆಂಡ್ ರಾಣಿ ಎಲಿಜಬೆತ್ ಕೈಗಡಿಯಾರವನ್ನ ಉಡುಗೊರೆಯಾಗಿ ಪಡೆದ ದಾಖಲೆಗಳಿವೆ. ಅಲ್ಲಿಂದ ಆರಂಭಗೊಂಡ ವಾಚ್ ಪಯಣ ಇದೀಗ  ಹಲವು ಬ್ರಾಂಡೆಡ್ ವಾಚ್‌ಗಳು ಸೇರಿದಂತೆ ದುಬಾರಿ ವಾಚ್‌ಗಳಾಗಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಮಾರುಕಟ್ಟೆಯಲ್ಲಿರುವ ಅತ್ಯಂತ ದುಬಾರಿ ಹಾಗೂ ಗರಿಷ್ಠ ಬೆಲೆಗೆ ಹರಾಜಾಗಿರೋ ವಾಚ್ ವಿವರ ಇಲ್ಲಿದೆ.

1) ಗ್ರಾಫ್ ಡೈಮಂಡ್ ಹಲ್ಲುಸಿನೇಶನ್:
ಇಂಗ್ಲೆಂಡ್ ಮೂಲದ ಗ್ರಾಫ್ ಡೈಮಂಡ್ ಆಭರಣ ಸಂಸ್ಥೆ ಅತ್ಯಂತ ದುಬಾರಿ ವಾಚ್ ನಿರ್ಮಿಸಿದ ಕೀರ್ತಿಗೆ ಪಾತ್ರವಾಗಿದೆ. ಗ್ರಾಫ್ ಡೈಮಂಡ್ ಹಲ್ಲುಸಿನೇಶನ್ ಹೆಸರಿನಲ್ಲಿ ಬಿಡುಗಡೆ ಮಾಡಿರೋ ಈ ವಾಚ್  ಬೆಲೆ 55 ಮಿಲಿಯನ್ ಯುಎಸ್ ಡಾಲರ್. ಅಂದರೆ ಸರಿಸುಮಾರು 405 ಕೋಟಿ ರೂಪಾಯಿಗೆ ಈ ವಾಚ್ ಹರಾಜಾಗಿದೆ. ಇದು ಸಂಪೂರ್ಣ ಡೈಮಂಡ್‌ನಿಂದ ರೂಪಿಸಲಾಗಿದೆ.

2) ಗ್ರಾಫ್ ಡೈಮಂಡ್ ಫ್ಯಾಸಿನೇಶನ್:
ಲಕ್ಸುರಿ ವಾಚ್‌ಗಳಿಗೆ ಹೆಸರುವಾಸಿಯಾಗಿರುವ ಗ್ರಾಫ್ ಡೈಮಂಡ್ ಸಂಸ್ಥೆ ಗ್ರಾಫ್ ಡೈಮಂಡ್ ಫ್ಯಾಸಿನೇಶನ್ ಅನ್ನೋ ವಾಚ್ ಹೊರತಂದಿದೆ. ಇದರ ಬೆಲೆ 294 ಕೋಟಿ ರೂಪಾಯಿ.

3)ಬ್ರೆಗ್ವೆಟ್ ನಂ.150:
ಬ್ರೆಗ್ವೆಟ್ ನಂ.150 ವಾಚ್. ಇದರ ಮೂಲ ಹೆಸರು ಮೇರಿ ಅಂಟೋನೆಟ್ಟೆ. ಸ್ವಿಟ್ಜರ್‍‌ಲೆಂಡ್ ಮೂಲದ ಅಬ್ರಾಂ ಲೂಯಿಸಿ ಬ್ರೆಗ್ವೆಟ್ ಈ ವಾಚ್ ತಯಾರಕ. 1782ರಲ್ಲಿ ಈ ವಾಚ್ ನಿರ್ಮಿಸಲಾಯಿತು. ಇದೀಗ ವಿಶ್ವದ 3ನೇ ದುಬಾರಿ ವಾಚ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬೆಲೆ 221 ಕೋಟಿ ರೂಪಾಯಿ.

4)ಚೋಪಾರ್ಡ್ 201-ಕ್ಯಾರಟ್ ವಾಚ್:
ಚೋಪಾರ್ಡ್ ವಾಚ್‌ನಲ್ಲಿ 201 ಕ್ಯಾರಟ್ 874 ಡೈಮಂಡ್ ಹೊಂದಿದೆ. ಇನ್ನು ಪಿಂಕ್, ಹಳದಿ ಹಾಗೂ ನೀಲಿ ಬಣ್ಣಗಳಲ್ಲಿ ಈ ವಾಚ್ ಲಭ್ಯವಿದೆ. ಇದರ ಬೆಲೆ 184 ಕೋಟಿ ರೂಪಾಯಿ.

5)ಪಾಟೆಕ್ ಫಿಲಿಪ್ ಸೂಪರ್‌ಕಾಂಪ್ಲಿಕೇಶನ್:
1933ರಲ್ಲಿ ಪಾಟೆಕ್ ಫಿಲಿಪ್ ಈ ವಾಚ್ ತಯಾರಿಸಿದರು. ಸತತ 5 ವರ್ಷಗಳ ಪರಿಶ್ರಮದಿಂದ ಪಾಟೆಕ್ ಫಿಲಿಪ್ ವಾಚ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಇದೀಗ ವಿಶ್ವದ 5ನೇ ದುಬಾರಿ ವಾಚ್ ಇನ್ನೋ ಹೆಗ್ಗಳಿಕೆಗೆ ಪಾಟೆಕ್ ಫಿಲಿಪ್ ವಾಚ್ ಪಾತ್ರವಾಗಿದೆ. ಇದರ ಬೆಲೆ 176 ಕೋಟಿ ರೂಪಾಯಿ.

6) ಜಾಕೋಬ್ & ಕೋ. ವಾಚ್:
ಜಾಕೋಬ್ & ಕೋ ಬಿಲಿನೇರ್ ವಾಚ್ 260 ಕ್ಯಾರಟ್ ಎಮ್ರಾಲ್ಡ್ ಕಟ್ ಡೈಮಂಡ್ಸ್‌ನಿಂದ ತಯಾರಿಸಲಾಗಿದೆ. ಇದರ ಬೆಲೆ 132 ಕೋಟಿ ರೂಪಾಯಿ.

7)ಪಾಟೆಕ್ ಫಿಲಿಪ್ ರೆಫ್.1518:
2016ರ ಹರಾಜಿನಲ್ಲಿ ಪಾಟೆಲ್ ಫಿಲಿಪ್ ರೆಫ್.1518 ವಾಚ್ 81 ಕೋಟಿ ರೂಪಾಯಿಗೆ ಹರಾಜಾಗಿದೆ. 1518ರಲ್ಲಿ ಈ ವಾಚ್ ನಿರ್ಮಿಸಲಾಯಿತು. 

8)ವಾಕ್ರೊನ್ ಕಾನ್ಸ್ಟಾಟಿನ್ 57260:
ಈ ವಾಚ್ ತಯಾರಿಕೆಗೆ  ತೆಗೆದುಕೊಂಡ ಸಮಯ ಬರೋಬ್ಬರಿ 8 ವರ್ಷ. ಈ ವಾಚ್ ಬೆಲೆ 58 ಕೋಟಿ ರೂಪಾಯಿ.

9)ಹುಬ್ಲೋಟ್ ಬಿಗ್ ಬ್ಯಾಂಗ್:
ಕನ್ನಡಿಗರಿಗೆ ಹುಬ್ಲೋಟ್ ವಾಚ್ ಕುರಿತು ಬಿಡಿಸಿ ಹೇಳಬೇಕಿಲ್ಲ. ಹುಬ್ಲೋ ವಾಚ್ ಉಡುಗೊರೆಯಾಗಿ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಿಸಿದ ಸಂಕಷ್ಟ ಎಲ್ಲರಿಗೂ ತಿಳಿದೇ ಇದೆ. ದುಬಾರಿ ವಾಚ್‌ಗಳ ಪೈಕಿ ಹುಬ್ಲೋಟ್ ಸಂಸ್ಥೆ ಬಿಗ್ ಬ್ಯಾಂಗ್ 9ನೇ ಸ್ಥಾನ ಪಡೆದಿದೆ. ಇದರ ಬೆಲೆ 36 ಕೋಟಿ ರೂಪಾಯಿ.

10) ಬ್ರಾಗ್ವೆಟ್ & ಫಿಲ್ಸ್ ನಂ.2667:
 1814ರಲ್ಲಿ ಬ್ರಾಗ್ವೆಟ್ & ಫಿಲ್ಸ್ ನಂ.2667 ಫ್ರಾನ್ಸ್‌ನ ಬಹುತೇಕ ಕಡೆಗಳಲ್ಲಿ ಮಾರಾಟವಾಗುತ್ತಿದ್ದ ವಾಚ್. ಇದೇ ವಾಚ್ 2012ರಲ್ಲಿ 34 ಕೋಟಿ ರೂಪಾಯಿಗೆ  ಹರಾಜಾದೆ.

Follow Us:
Download App:
  • android
  • ios