Asianet Suvarna News Asianet Suvarna News

ಮಾಮೂಲಿ ಇಡ್ಲಿ ತಿಂದು ಬೇಜಾರಾದ್ರೆ ಇಲ್ಲಿದೆ ಟೊಮೆಟೋ ಇಡ್ಲಿ

ಟೊಮೆಟೋ ಇಂದ ಯಾವ ಯಾವ ಖಾದ್ಯಗಳನ್ನು ತಯಾರಿಸಬಹದು ಎಂದರೆ, ಸಾರು, ಸಾಂಬಾರು, ಪಲ್ಯ, ಚಟ್ನಿ....ಆದರೆ ಟೊಮೆಟೋ ಇಂದ ರುಚಿಯಾದ ಇಡ್ಲಿಯನ್ನೂ ತಯಾರಿಸಬಹುದು ಗೊತ್ತಾ. ಅದು ಹೇಗೆ ಎಂದು ಆಶ್ಚರ್ಯ ವಾಗುತ್ತಿದೆಯಾ?

Tomato idly

ಇಲ್ಲಿದೆ ನೋಡಿ ನಿಮ್ಮ ಬಾಯಿ ರುಚಿ ಹೆಚ್ಚಿಸುವ ಟೊಮೆಟೋ ಇಡ್ಲಿ ಮಾಡುವ ವಿಧಾನ.

ಬೇಕಾಗುವ ಸಾಮಗ್ರಿಗಳು:

  •  6 ಟೊಮೆಟೋ 
  •  1 ಗ್ಲಾಸ್  ಉದ್ದಿನ ಬೇಳೆ 
  •  2 ಗ್ಲಾಸ್ ಇಡ್ಲಿ ರವೆ 
  •  ಉಪ್ಪುರುಚಿಗೆ ತಕ್ಕಷ್ಟು
  •  ಒಣ ದ್ರಾಕ್ಷಿ ಸ್ವಲ್ಪ
  •  2 ಚಮಚ ಎಣ್ಣೆ  

ಮಾಡುವ ವಿಧಾನ: 

ಉದ್ದಿನ ಬೇಳೆ ಮತ್ತು ಇಡ್ಲಿ ರವೆಯನ್ನು ಪ್ರತ್ಯೇಕವಾಗಿ ನೀರು ಹಾಕಿ ಮೂರು ಗಂಟೆಗಳ ಕಾಲ ನೆನೆ ಹಾಕಬೇಕು. ಬಳಿಕ ಉದ್ದಿನ ಬೇಳೆಯನ್ನು ನಯವಾಗಿ ಹಿಟ್ಟು ಮಾಡಿಕೊಳ್ಳಬೇಕು. ಇದಕ್ಕೆ ಇಡ್ಲಿ ರವೆ ಮತ್ತು ಉಪ್ಪನ್ನು ಸೇರಿಸಿ ಪಾತ್ರೆಯಲ್ಲಿ ಮುಚ್ಚಿಡಿ. ರಾತ್ರಿ ವೇಳೆ ಹೀಗೆ ತಯಾರಿಸಿದ ಹಿಟ್ಟನ್ನು ಮುಚ್ಚಿಡಬೇಕು. ಬೆಳಗ್ಗೆ ಟೊಮೆಟೋವನ್ನು ರುಬ್ಬಿ ರಸ ತೆಗೆದುಕೊಂಡು ಹಿಟ್ಟಿನ ಜೊತೆ ಸೇರಿಸಿ. ಹಿಟ್ಟು ತೀರಾ ತೆಳ್ಳಗಾಗದಂತೆ ಎಚ್ಚರವಿರಲಿ. ಈಗ ಇಡ್ಲಿ ಪ್ಲೇಟ್‌ಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಅದರ ಮೇಲೆ ಹಿಟ್ಟನ್ನು ಹಾಕಿ ಆವಿಯಲ್ಲಿ ಬೇಯಿಸಿ. ನಂತರ ಅದನ್ನು ಕೊಬ್ಬರಿ ಚಟ್ನಿಯೊಂದಿಗೆ ಇಡ್ಲಿ ಸವಿದರೆ ನಾಲಿಗೆ ಮತ್ತೆ ಮತ್ತೆ ಬಯಸುವ ರುಚಿಯಾದ ಟೊಮೆಟೋ ಇಡ್ಲಿ ನಿಮ್ಮ ಪಾಕಶಾಲೆಯ ಬತ್ತಳಿಕೆಗೆ ಹೊಸ ಸೇರಲಿದೆ.

Follow Us:
Download App:
  • android
  • ios