ಒಳ ಉಡುಪಾದರೂ ಬ್ರಾ ನಿರ್ವಹಣೆ ನಾಜೂಕಾಗಿರಲಿ

Tips to maintain brasieres
Highlights

ಹೆಂಗಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ  ಬ್ರೇಸಿಯರ್ಸ್ ಇಂದು ಮಾರುಕಟ್ಟೆಯಲ್ಲಿ ವಿಧ ವಿಧವಾಗಿ ಸಿಗುತ್ತವೆ. ಒಳ ಉಡುಪಾದರೂ ಇದರ ಆಯ್ಕೆಯಲ್ಲಿ ಮಹಿಳೆಯರು ಸದಾ ಜಾಗೃತರಾಗಿರುತ್ತಾರೆ. ಇದು ಮಹಿಳೆಯ ಆತ್ಮ ವಿಶ್ವಾಸ ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುವುದು ಸುಳ್ಳಲ್ಲ.

ಇಂಥ ಮುಖ್ಯವಾದ ಒಳ ಉಡುಪು ಕೊಳ್ಳುವಾಗ ಹಾಗೂ ಮೆಂಟೇನ್ ಮಾಡುವ ಕೆಲವು ಅಂಶಗಳ ಕಡೆಗೆ ಗಮನ ಹರಿಸಬೇಕು..

- ಬ್ರಾ ಹುಕ್.. 

ಹುಕ್ ಹಾಕಿ ನಂತರ ತೊಳೆಯಲು ಹಾಕಬೇಕು. ಇಲ್ಲವಾದರೆ ಬೇರೆ ಬಟ್ಟೆಯೊಂದಿಗೆ ಸಿಕ್ಕಿ ಹಾಕಿಕೊಂಡು ಮುರಿದು ಹೋಗುವ ಹುಕ್ ಸಾಧ್ಯತೆ ಇರುತ್ತದೆ. 

- ಕೈಗೆ ಕೆಲಸ ಕೊಡಿ

ವಾಷಿಂಗ್ ಮಷಿನ್‌ಗೆ ಹಾಕೋ ಬದಲು ಬ್ರಾಗಳನ್ನು ಕೈಯಲ್ಲಿಯೇ ಒಗೆಯಿರಿ. ಸಾಫ್ಟ್ ಮಾರ್ಜಕಗಳನ್ನು ಬಳಸಿದರೆ ತ್ವಚೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ಎಚ್ಚರವಹಿಸಬಹುದು.

- ಬ್ರಾ ವಾಷಿಂಗ್ ಬ್ಯಾಗ್

ವಾಷಿಂಗ್ ಮಷಿನ್‌ಗೆ ಹಾಕಲೆಂದೇ ಒಂದು ಬ್ಯಾಗ್ ಸಿಗುತ್ತದೆ. ಇದರೊಳಗೆ ಹಾಕಿ ಒಗೆದರೆ ಬ್ರಾ ಹಾಳಾಗುವುದಿಲ್ಲ.

- ಬಿಸಿ ನೀರು ಬೇಡ

ಬಿಸಿ ನೀರು ಬಳಸುವುದರಿಂದ ಬಟ್ಟೆಗೆ ಹಾನಿಯಾಗುತ್ತದೆ ಹಾಗೂ ಬಣ್ಣ ಕುಂದುವ ಸಾಧ್ಯತೆಯೂ ಹೆಚ್ಚು. ಬೆಚ್ಚನೆ ನೀರಿನ ಬಳಕೆ ಹೆಚ್ಚು ಉಪಯುಕ್ತ.

ಬಿಸಿಲಲ್ಲಿ ಒಣ ಹಾಕಿ

 ಬಟ್ಟೆಯನ್ನು ಡ್ರೈಯರ್‌ ಹಾಕೋ ಬದಲು, ಸೂರ್ಯನ ಕಿರಣದಲ್ಲಿ ಒಣಗಿಸಿದರೆ ಬಟ್ಟೆಯೂ ಹಾಳಾಗುವುದಿಲ್ಲ ಹಾಗೂ ಎಲೆಸ್ಟಿಸಿಟಿಯೂ ಬಾಳಿಕೆ ಬರುತ್ತದೆ.

loader