ನನಗೆ ನನ್ನ ಮಗ ಎಂದರೆ ಪ್ರಾಣ. ಇರುವುದು ಒಬ್ಬನೇ ಮಗ. ಈಗ ಅವನು ಬೆಳೆದು ನಿಂತಿದ್ದರೂ ನನ್ನ ಪಾಲಿಗೆ ಚಿಕ್ಕ ಮಗನೇ. ದೂರದ ದೆಹಲಿಯಲ್ಲಿ ಅವನಿಗೆ ಕೆಲಸ ಸಿಕ್ಕಿದೆ. ಒಳ್ಳೆಯ ಸಂಬಳವೂ ಕೊಡುತ್ತಿದ್ದಾರೆ. ಆದರೆ ಏಕಾಏಕಿ ಅಷ್ಟು ದೂರ ಅವನನ್ನು ಕಳುಹಿಸಿ ಇಲ್ಲಿ ನಾನು ನನ್ನ ಹೆಂಡತಿ ಹೇಗಿರುವುದು, ಅವನು ಒಬ್ಬನೇ ಅಲ್ಲಿ ಹೇಗೆ ಬದುಕು ನಡೆಸುತ್ತಾನೆ ಎನ್ನುವ ಸಂಕಟ ಕಾಡುತ್ತಿದೆ. ಬೆಳೆದ ಮಗ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಆಸೆ ಇದ್ದರೂ ಅಷ್ಟು ದೂರಕ್ಕೆ ಹೋಗಿ ಏನು ಮಾಡಬೇಕು. ಬೇಡ ಇಲ್ಲಿಯೇ ಹತ್ತಿರದಲ್ಲಿ ಕೆಲಸ ಹುಡುಕು, ನಮ್ಮ ಕಣ್ಣ ಮುಂದೆಯೇ ಇರು ಎಂದು ಹೇಳೋಣ ಎನ್ನಿಸುತ್ತದೆ. ಏನು ಮಾಡಲಿ? ತಿಳಿಯದಾಗಿದೆ.

-ಅನಾಮಿಕ 

ತಂದೆಯೊಬ್ಬರ ಎದುರಿಸುತ್ತಿರುವ ಈ ಸಮಸ್ಯೆಗೆ ನಿಮ್ಮ ಸಲಹೆಗಳನ್ನು Suvarnanewsindia@gmail.com ಗೆ ಕಳುಹಿಸಿ