ಸದಾ ನೀರು ಬಿದ್ದರೆ ಸ್ಲಿಪ್ಪರ್ಸ್ ಅಥವಾ ಶೂಸ್ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ. ಕೆಸರು, ಕೊಚ್ಚೆ ಹಾರಿ ಅದು ನೋಡದಂತಾಗಿರುತ್ತದೆ. ಆದರೆ, ಇಂಥ ಚಪ್ಪಲಿಗಳನ್ನೂ ನೀಟಾಗಿ ಮೆಂಟೇನ್ ಮಾಡಿದರೆ ಹಾಳಾಗದಂತೆ ಎಚ್ಚರವಹಿಸಬಹುದು. ಹೇಗೆ?

  • ಶೂ ಅಥವಾ ಚಪ್ಪಲಿಗಳಿಗೆ ಶೂ ಬ್ರಷ್‌ನಿಂದ ಪಾಲಿಷ್ ಮಾಡಿಡಬೇಕು. ಇಲ್ಲವಾದಲ್ಲಿ ಅದಕ್ಕೆ ಅಂಟಿರುವ ಮಣ್ಣು ಹಾಗೂ ತೇವಾಂಶ ಉಳಿದು, ಬೇಗ ಹಾಳಾಗುತ್ತದೆ.
  • ಕೋಣೆಯಲ್ಲಿ ಇಡುವ ಮುನ್ನ ತೇವಾಂಶ ತೆಗೆದಿಡಬೇಕು ಇಲ್ಲವಾದರೆ ಅದರ ಮೇಲೆ ಶಿಲೀಂದ್ರಗಳನ್ನು ಸೃಷ್ಟಿಸುತ್ತದೆ.
  • ವ್ಯಾಕ್ಸಿಂಗ್‌ಗೆ ವೆಚ್ಚವಾದರೂ, ಬೆಲೆ ಬಾಳುವ ಶೂಸ್, ಚಪ್ಪಲಿ ಹಾಳಾಗದಂತೆ ಕಾಪಾಡಿಕೊಳ್ಳಬಹುದು. ಆಗಾಗ ಪಾಲಿಶ್ ಮಾಡುವುದ ತಪ್ಪಿಸಬಾರದು.
  • ಶೊ ರ‍್ಯಾಕ್‌ನಲ್ಲಿಡೋ ಮುನ್ನ ಪೇಪರ್ ಅಥವಾ ಶೂ ಟ್ರೇ ಬಳಿಸಿದರೆ, ತೇವಾಂಶ ಕಡಿಮೆಯಾಗುತ್ತದೆ. 
  • ಶೂ ರ‍್ಯಾಕ್‌‌ನಲ್ಲಿ ತೇವಾಂಶ ನಿರ್ವಹಣೆಗೆಂದೇ ಒಂದು ಯಂತ್ರ ಸಿಗುತ್ತದೆ. ಅದನ್ನು ಫಿಕ್ಸ್ ಮಾಡೋದ್ರಿಂದ ದುಬಾರಿ ಚಪ್ಪಲಿಗಳನ್ನು ಕಾಪಾಡಿಕೊಳ್ಳಬಹುದು.
  • ಶೊ ಸ್ಪ್ರೇ ಬಳಸುವುದರಿಂದ ಕೊಳೆ ತೆಗೆಯಬಹುದು.