Asianet Suvarna News Asianet Suvarna News

ಫರ್ನೀಚರ್ ಎಕ್ಸ್ ಪೋಗೆ ಬನ್ನಿ - ಚಿನ್ನದ ನಾಣ್ಯ ಗೆಲ್ಲಿ

‘ಇಂಡಿಯನ್ ಫರ್ನಿಚರ್ ಆ್ಯಂಡ್ ಹೋಮ್ ಡೆಕೊರ್ ಎಕ್ಸ್‌ಪೋ- 2018’ ಸೆ. 29ರಿಂದ ಅ. 2ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿದೆ.ಈ ಎಕ್ಸ್‌ಪೋದಲ್ಲಿ ಭೇಟಿ ನೀಡುವವರು ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯವನ್ನೂ ಗೆಲ್ಲಬಹುದು.
 

Suvarna News presents India Furniture and Home Decor Expo Begins Tomorrow
Author
Bengaluru, First Published Sep 28, 2018, 11:30 AM IST

ಬೆಂಗಳೂರು: ವೈವಿಧ್ಯಮಯ ಪೀಠೋಪಕರಣಗಳು ಮತ್ತು ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ‘ಇಂಡಿಯನ್ ಫರ್ನಿಚರ್ ಆ್ಯಂಡ್ ಹೋಮ್ ಡೆಕೊರ್ ಎಕ್ಸ್‌ಪೋ- 2018’ ಸೆ. 29ರಿಂದ ಅ. 2ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿದೆ. ಕನ್ನಡಪ್ರಭ ಮತು ಸುವರ್ಣ ನ್ಯೂಸ್ ಸಹಯೋಗದಲ್ಲಿ ನಡೆಯುತ್ತಿರುವ 2ನೇ ಆವೃತ್ತಿಯ ಈ ಎಕ್ಸ್‌ಪೋಗೆ ಭೇಟಿ ನೀಡುವವರು ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯವನ್ನೂ ಪ್ರತಿದಿನ ಗೆಲ್ಲಬಹುದು.

ವೈವಿಧ್ಯಮಯ ಫರ್ನಿಚರ್ ಲಭ್ಯ:

ಈ ಪ್ರದರ್ಶನದಲ್ಲಿ ದೇಶದ ಅತ್ಯುತ್ತಮ ಪೀಠೋಪಕರಣ ಮತ್ತು ಗೃಹ ಅಲಂಕಾರಿಕ ಉತ್ಪನ್ನಗಳು ಲಭ್ಯ. ಎಕ್ಸ್‌ಪೋ ದಲ್ಲಿ ದೇಶ ವಿದೇಶಗಳ ಪೀಠೋಪಕರಣ ಮತ್ತು ಗೃಹ ಅಲಂಕಾರಕ ಉತ್ಪನ್ನಗಳ ಉತ್ಪಾದಕರು, ಡೀಲರ್ಸ್‌, ಸಗಟು ಮಾರಾಟಗಾರರು, ವಿನ್ಯಾಸಗಾರರು ಭಾಗವಹಿಸಲಿದ್ದಾರೆ. ವಿದೇಶಿ ಪಿಠೋಪಕರಣಗಳು, ಗ್ರಾಹಕರಿಗೆ ಮೆಚ್ಚುಗೆಯಾಗುವಂತ ಪಿಠೋಪಕರಣಗಳು, ಸಾಲಿಡ್‌ವುಡ್, ಲೆದರ್ ಪೀಠೋಪಕರಣಗಳು, ಬೆಡ್ಸ್, ಸೋಫಾಗಳು, ಡೈನಿಂಗ್ ಟೇಬಲ್ಸ್, ಪಿಲ್ಲೋಗಳು, ಕರಕುಶಲ ವಸ್ತುಗಳು, ಕಾರ್ಪೆಟ್ಸ್, ದೇಹದಾರ್ಢ್ಯ ವಸ್ತುಗಳು, ಆಧುನಿಕ ಕಿಚನ್ ವಸ್ತುಗಳು, ಗೋಡೆ ಗಡಿಯಾರಗಳು, ಹಸ್ತಕೃತಿಗಳು, ಕಲಾಕೃತಿಗಳು, ಕಚೇರಿ ಪಿಠೋಪಕರಗಳು ಸೇರಿದಂತೆ ವಿವಿಧ ಪಿಠೋಪಕರಣ ಹಾಗೂ ಗೃಹ ಅಲಂಕಾರಿಗಳ ಬಸ್ತುಗಳು ಒಂದೇ ವೇದಿಕೆಯಲ್ಲಿ ಗ್ರಾಹಕರ ಕೈಗೆ ಎಟಕುವ ದರದಲ್ಲಿ ಲಭ್ಯ.

ಐಎಂಎ ಜ್ಯುವೆಲ್ಸ್ ಈ ಚಿನ್ನದ ನಾಣ್ಯಗಳ ಪ್ರಾಯೋಜಕರಾಗಿದ್ದಾರೆ. ಕನ್ನಡ ಚಲನಚಿತ್ರ ನಟ ಶ್ರೀಮುರಳಿ ಎಕ್ಸ್‌ಪೋ ಉದ್ಘಾಟಿಸಲಿದ್ದಾರೆ. 

Suvarna News presents India Furniture and Home Decor Expo Begins Tomorrow

Follow Us:
Download App:
  • android
  • ios