ಟ್ಯಾಟು ಹಾಕಿಸಿಕೊಂಡವರನ್ನು ವಿಚಿತ್ರವಾಗಿ ನೋಡುತ್ತೇವೆ. ಹಿಂದು ಮುಂದು ಗೊತ್ತಿಲ್ಲದೆ ಅವರನ್ನು ಹಿಯಾಳಿಸುತ್ತೇವೆ. ಆದರೆ ಅಚ್ಚೆ ಅಥವಾ ಟ್ಯಾಟು ಹಾಕಿಸಿಕೊಂಡವರಿಗೆ ಕೆಲಸವೂ ಬೇಗ ಸಿಗುತ್ತಂತೆ!

ಹೌದು, ಸಂಶೋಧನೆಯೊಂದು ಇದನ್ನು ದೃಢಪಡಿಸಿದೆ. ಆದ್ದರಿಂದ ಟ್ಯಾಟೂ ಹುಚ್ಚಿರುವವರಿಗೆ ಇದು ಅತ್ಯಂತ ಸಂತೋಷ ನೀಡುವಂಥ ವಿಚಾರ. ಅಚ್ಚೆ ಎಂಥ ಹಾಕಿಸಿಕೊಳ್ಳುವುದು? ಕೆಲಸ ಸಿಗೋಲ್ಲವೆಂದು ಪೋಷಕರ ಆತಂಕಕ್ಕೂ ಅರ್ಥವಿಲ್ಲ ಬಿಡಿ.

ಟ್ಯಾಟೂ ಮಂದಿಗೆ ಟ್ಯಾಲೆಂಟ್ ಜಾಸ್ತಿ

ಸಂಶೋಧನೆಯ ಪ್ರಕಾರ ಹೆಚ್ಚು ಟ್ಯಾಲೆಂಟ್ ಹೊಂದಿರುವವರು ಟ್ಯಾಟುವನ್ನ ವಿಭಿನ್ನ ರೀತಿಯಲ್ಲಿ ಹಾಕಿ ಕೊಂಡಿರುತ್ತಾರೆ. ಸ್ವತಂತ್ರ ಲೋಕದಲ್ಲಿ ವಿಹರಿಸಿ, ಅವರದ್ದೇ ರೀತಿಯಲ್ಲಿ ಯೋಚಿಸುವ ಗುಣ ಹೊಂದಿರುತ್ತಾರೆ.  ಹಿತವಾಗಿ ಮಾತನಾಡುವ ಗುಣ ಹೊಂದಿರುವ ಟ್ಯಾಟೂ ಮಂದಿ ಕೆಲಸವನ್ನೂ ವಿಭಿನ್ನವಾಗಿ ನಿರ್ವಹಿಸುತ್ತಾರೆಂದು ಸಂಶೋಧನೆ ಹೇಳಿದೆ. ಸಂಸ್ಥೆಯನ್ನೂ ಮುಂದಕ್ಕೆ ತರುವ ಸಾಮರ್ಥ್ಯ ಇರುತ್ತಂತೆ ಇವರಿಗೆ. 

ಇಲ್ಲದವರಿಗಿಂತ ಟ್ಯಾಟು ಇರುವವರಿಗೆ ಕೆಲಸ ಸಿಗುವುದು ಹೆಚ್ಚಂತೆ. ಮಂಕಾಗಿ ಒಂದೆಡೆ ಕೂತರೆ, ಏನೂ ಮಾಡಲಾಗೋಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಆ್ಯಕ್ಟಿವ್ ಆಗಿರಬೇಕು. ಟ್ಯಾಟು ಹಾಕಿಸಿಕೊಂಡ ಮಂದಿ ಚಟುವಟಿಕೆಯಿಂದ ಇರುತ್ತಾರೆಂಬುವುದು ಈ ಸಂಶೋಧನೆ  ಹೇಳುತ್ತದೆ. 

ಈ ಎಲ್ಲ ಅಂಶಗಳನ್ನು ಗಮನಿಸುವ ಕಂಪನಿ, ಟ್ಯಾಟೂ ಹಾಕಿಸಿಕೊಂಡವರಿಗೆ ಕೆಲಸ ಕೊಟ್ಟು ಬಿಡುತ್ತಂತೆ.