ಇದಾದ ಮೇಲೆ ಮತ್ತೆರಡು ಪುಟ್ಟ ಮಕ್ಕಳನ್ನು ದತ್ತು ಪಡೆದು ಅವುಗಳ ಆರೈಕೆಗೆ ನಿಂತಾಗ ಅರರೇ ಸನ್ನಿ ಇದೇನಿದು ಎಂದು ಹೇಳಿಕೊಂಡವರ ಸಂಖ್ಯೆಯೂ ದೊಡ್ಡದೇ. ಆದರೆ ಈಗ ಅದೆಲ್ಲಕ್ಕೂ ಉತ್ತರವೆಂಬಂತೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ ಸನ್ನಿ ಲಿಯೋನ್. ‘ನನಗೆ ಈಗ ನಾನೊಬ್ಬಳು ಒಳ್ಳೆಯ ತಾಯಿ ಎನ್ನುವ ಫೀಲ್ ಇದೆ. ಮೂರು ಮಕ್ಕಳೇ ಈಗ ನನ್ನ ಪ್ರಪಂಚ. ಬಹಳಷ್ಟು ಮಂದಿ ಕಂಡದ್ದು, ಕೇಳಿದ್ದನ್ನೇ ಸತ್ಯ ಎಂದು ನನ್ನ ಬಗ್ಗೆ ಕತೆ ಕಟ್ಟುತ್ತಾರೆ. ನಾನು ಇದಕ್ಕೆಲ್ಲಾ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಆದರೆ ಅಸಲಿ ಕತೆ ಬೇರೆಯೇ ಇರುತ್ತೆ. ಅದು ನನಗೆ ನನ್ನ ಸುತ್ತ ಇರುವ ನನ್ನ ಆತ್ಮೀಯರಿಗೆ ಗೊತ್ತಿದ್ದರೆ ಸಾಕು. ಈಗ ನನ್ನ ಮುಂದಿನ ಕನಸು ಮತ್ತು ಆಸೆ ನನ್ನ ಮಕ್ಕಳಿಗೆ ತಾಯಿ ಪ್ರೀತಿಯಲ್ಲಿ ಸ್ವಲ್ಪವೂ ಕೊರತೆ ಉಂಟಾಗಬಾರದು ಹಾಗೆ ನೋಡಿಕೊಳ್ಳಬೇಕು ಎಂಬುದಷ್ಟೇ’ ಎಂದು ಮಕ್ಕಳ ಬಗ್ಗೆ, ತನ್ನ ತಾಯ್ತನದ ಸವಿಯ ಬಗ್ಗೆ ಹೇಳಿಕೊಂಡಿರುವ ಸನ್ನಿ ಲಿಯೋನ್ ಮುಂದೆ ಕೆಟ್ಟದ್ದನ್ನೇ ಎತ್ತಿ ತೋರಿಸುವ ಒಂದು ವರ್ಗದಿಂದ ಮಕ್ಕಳನ್ನು ದೂರವಿಟ್ಟು, ಸದಾ ಒಳ್ಳೆಯದ್ದನ್ನೇ ಚಿಂತಿಸುವ, ಆಲೋಚಿಸುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.