ನಗರ ಜೀವನದಲ್ಲಿ ಹೆಚ್ಚಾಗ್ತಾಯಿದೆ ಒತ್ತಡ; ರಿಲೀಫ್ ಪಡೆಯುವುದು ಹೇಗೆ?

Stress Free tips
Highlights

ಆಧುನಿಕ ಬದುಕಿನ ಅವಿಭಾಜ್ಯ ಅಂಗದಂತಿರುವ ಸ್ಟ್ರೆಸ್‌ನಿಂದ ಉದ್ಭವಿಸುವ ಸಮಸ್ಯೆಗಳು ಹಲವಾರು. ಮಧುಮೇಹ, ಬಿ.ಪಿ, ಹೃದಯ ಸಮಸ್ಯೆ, ನಿದ್ರಾವಧಿಯಲ್ಲಿ ವ್ಯತ್ಯಾಸ, ಅತಿಯಾದ ತೂಕ ಹೆಚ್ಚಳ, ಸಡನ್ನಾಗಿ ತೂಕ ಇಳಿಯೋದು ಇತ್ಯಾದಿಗಳಾಗುತ್ತವೆ. ಇದಕ್ಕೆ ಎಕ್ಸರ್ ಸೈಸ್ ಬೆಸ್ಟ್. ಇವು ಉದ್ವಿಗ್ನತೆಯನ್ನು ಶಮನ ಮಾಡಿ ದೇಹ ಹಾಗೂ ಮನಸ್ಸಿಗೆ ಆರಾಮದಾಯಕ  ಅನುಭವ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಟ್ರೆಸ್ ಬಸ್ಟರ್‌ಗಳಾಗುತ್ತವೆ. 

ಆಫೀಸ್‌ನಲ್ಲಿ ಮಾಡುವ ಸಿಂಪಲ್ ವ್ಯಾಯಾಮ

ಇವು ಬಹಳ ಸರಳವಾದ ವ್ಯಾಯಾಮಗಳು. ಆಫೀಸ್ ನಲ್ಲಿ, ಮನೆಯಲ್ಲಿ, ಡ್ರೈವ್ ಮಾಡುವಾಗ, ಉದ್ದದ ಕ್ಯೂನಲ್ಲಿ ನಿಂತಾಗ, ಎಲ್ಲಿ ಬೇಕಾದರೂ ಈ ಎಕ್ಸರ್ ಸೈಸ್ ಮಾಡಬಹುದು. ಹೊಟ್ಟೆಯನ್ನು ಒಳಗೆಳೆದುಕೊಳ್ಳಿ. ಸುದೀರ್ಘವಾಗಿ ಉಸಿರೆಳೆದುಕೊಳ್ಳಿ. ಉಸಿರು ಶ್ವಾಸಕೋಶದೊಳಗೆ ತುಂಬಿಕೊಂಡ ಅನುಭವವಾಗುತ್ತೆ. ನಾಲ್ಕು ಎಣಿಕೆಯವರೆಗೂ ಹೀಗೆ ಉಸಿರೆಳೆದುಕೊಳ್ಳಿ. ಎರಡೆಣಿಕೆವರೆಗೆ ಉಸಿರನ್ನು ಹಿಡಿದಿಟ್ಟುಕೊಳ್ಳಿ. ಮತ್ತೆ ನಾಲ್ಕು ಎಣಿಕೆಯಲ್ಲಿ ಹೊರಗೆ ಬಿಡಿ. ದಿನದಲ್ಲಿ ಸಾಧ್ಯವಾದಾಗಲೆಲ್ಲ ಹೀಗೆ ಮಾಡಿ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ.

ಮನೆಯಲ್ಲಿ ಈ ವ್ಯಾಯಾಮ ಮಾಡಿ

ಇದು ಎಲ್ಲ ವಯಸ್ಸಿನವರೂ ಮಾಡಬಹುದಾದ ಸರಳ ವ್ಯಾಯಾಮ. ಬಹಳ ನಿಧಾನಗತಿಯಲ್ಲಿರುವ ಈ ವ್ಯಾಯಾಮ ದೇಹಕ್ಕೆ ಆರಾಮದಾಯಕ ಅನುಭವ ನೀಡುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇಡೀ ದೇಹಕ್ಕೆ ಶಕ್ತಿ ಸಂಚಯವಾಗುತ್ತದೆ. 1 ಗಂಟೆಗಳ ಕಾಲ ಈ ವ್ಯಾಯಾಮ ಮಾಡುವುದರಿಂದ ಇಡೀ ದೇಹ ರಿಲ್ಯಾಕ್ಸ್ ಆಗಿ ಸ್ಟ್ರೆಸ್ ಮಾಯವಾಗುತ್ತದೆ.

ಕುರ್ಚಿ ಮೇಲೆ ಕಾಲಿಟ್ಟು ಮಾಡುವ ವ್ಯಾಯಾಮ
 
ಕುರ್ಚಿ ಬಳಿ ಮೈಚಾಚಿ ಮಲಗಿ. ಕಾಲುಗಳನ್ನು ಕುರ್ಚಿಯ ಕೂರುವ ಜಾಗದ ಮೇಲೆ ಚಾಚಿ. ದೀರ್ಘವಾಗಿ ಉಸಿರಾಡಿ. ನಿಮ್ಮ ಸಂಪೂರ್ಣ ಗಮನ ಉಸಿರಾಟದ ಮೇಲಿರಲಿ. ಕಾಲುಗಳ ಭಾಗದ ಒತ್ತಡ ಇದರಿಂದ ನಿವಾರಣೆಯಾಗುತ್ತದೆ.
ಔಟ್‌ಡೋರ್ ಎಕ್ಸರ್‌ಸೈಸ್  ವಾಕಿಂಗ್ ಮಾಡುವಾಗ ನಿಮ್ಮ ಪ್ರತಿಹೆಜ್ಜೆಯನ್ನೂ ಗಮನಿಸಿ. ದೀರ್ಘವಾಗಿ ಉಸಿರಾಡುತ್ತ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. ಇದು ಒತ್ತಡ ನಿವಾರಣೆಗೆ ಉತ್ತಮ. ಜೊತೆಗೆ ಪ್ರತಿದಿನ ಪ್ರಾಣಾಯಾಮ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ.  

loader