Asianet Suvarna News Asianet Suvarna News

ಇಂತಹ ಸುಂದರಿಯನ್ನು ಜಗತ್ತಿನಲ್ಲಿ ಇವನೊಬ್ಬನೆ ಮದುವೆಯಾಗಿರುವುದು

ಲೀ ಜಿನ್ ಗೆ  ಸಂಬಂಧಿಕರು, ಸ್ನೇಹಿತರು ಬುದ್ಧಿ ಮಾತು ಹೇಳಿದರೂ  ಅದ್ಯಾವುದಕ್ಕೂ ಈತ ತಲೆ ಕೆಡಿಸಿಕೊಂಡಿಲ್ಲ. ವಿಲಕ್ಷಣ ಮದುವೆಯ ನಂತರ ತಲೆ ದಿಂಬಿನ ಜೊತೆಯಲ್ಲೇ ನಿತ್ಯ ಸುತ್ತಾಟ, ಮಾಲ್ ಗಳಿಗೂ ಕರೆದುಕೊಂಡು ಹೋಗುತ್ತಾನೆ, ಪಾರ್ಕಿನಲ್ಲಿ ಅದರ ಜೊತೆ ಕುಳಿತು ಒಬ್ಬನೆ ಮಾತನಾಡುತ್ತಿರುತ್ತಾನೆ. 

South Korean Man Married A Pillow
Author
Bengaluru, First Published Oct 1, 2018, 4:30 PM IST
  • Facebook
  • Twitter
  • Whatsapp

ಸಿಯೋಲ್[ಅ.01]: ಜಗತ್ತಿನಲ್ಲಿ ನಿತ್ಯವೂ ಸಾವಿರಾರು ವಿಚಿತ್ರಗಳು ಸಂಭವಿಸುತ್ತವೆ. ಆದರೆ ಈ ವಿಚಿತ್ರ ಎಲ್ಲ ವಿಚಿತ್ರಗಳನ್ನು ಮೀರಿದೆ. ದಕ್ಷಿಣ ಕೊರಿಯಾದ ಯುವಕನೊಬ್ಬ ತಲೆ ದಿಂಬನ್ನು ಮದುವೆಯಾಗಿ  ಹೊಸ ಜೀವನಕ್ಕೆ ಕಾಲಿಟ್ಟಿದ್ದಾನೆ. 

ಕೇಳುಗರಿಗೆ ಏನಪ್ಪ ಇದು ಎಂದು ಅನಿಸಿದರೂ ತಾನು ಇದರ ಜೊತೆಯಲ್ಲೇ ಜೀವನ ಸಾಗಿಸುವುದಾಗಿ ಹೇಳುತ್ತಿದ್ದಾನೆ. ವಿವಾಹವಾದವನ ಹೆಸರು ಲೀ ಜಿನ್ ಗ್ಯೂ ತಾನು ಮದುವೆಯಾದ ದಿಂಬಿಗೆ ಪೇಟ್ ಟೇಸ್ಟಾ ರೊಸ್ಸಾ ಎಂದು ಹೆಸರಿಟ್ಟಿದ್ದಾನೆ. ಆಪ್ತರ ಸಮ್ಮುಖದಲ್ಲಿ ಚರ್ಚಿನಲ್ಲಿ ವಿವಾಹವಾಗಿದ್ದು ಕೆಲವರು ಲೀ ಜಿನ್ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರೆ ಮತ್ತೂ ಕೆಲವರು ಪ್ರಚಾರದ ಸ್ಟಂಟ್ ಎಂದು ಕರೆದಿದ್ದಾರೆ.

ಲೀ ಜಿನ್ ಗೆ  ಸಂಬಂಧಿಕರು, ಸ್ನೇಹಿತರು ಬುದ್ಧಿ ಮಾತು ಹೇಳಿದರೂ  ಅದ್ಯಾವುದಕ್ಕೂ ಈತ ತಲೆ ಕೆಡಿಸಿಕೊಂಡಿಲ್ಲ. ವಿಲಕ್ಷಣ ಮದುವೆಯ ನಂತರ ತಲೆ ದಿಂಬಿನ ಜೊತೆಯಲ್ಲೇ ನಿತ್ಯ ಸುತ್ತಾಟ, ಮಾಲ್ ಗಳಿಗೂ ಕರೆದುಕೊಂಡು ಹೋಗುತ್ತಾನೆ, ಪಾರ್ಕಿನಲ್ಲಿ ಅದರ ಜೊತೆ ಕುಳಿತು ಒಬ್ಬನೆ ಮಾತನಾಡುತ್ತಿರುತ್ತಾನೆ. ಬೇರೆ ಮದುವೆಯಾಗುವುದಿಲ್ಲವೇ ಎಂದು ಯಾರಾದರೂ ಸಾರ್ವಜನಿಕರು ಕೇಳಿದರೆ ಇದೇ ನನ್ನ ಹಣೆಬರಹ, ಇದನ್ನು ಬದಲಿಸುವುದು ಸಾಧ್ಯವಿಲ್ಲ. ಜೀವನವನ್ನು ಹೀಗೆ ಸಾಗಿಸಿಕೊಂಡು ಹೋಗುತ್ತೇನೆ ಎಂದು ಮಾರುತ್ತರ ನೀಡುತ್ತಾನೆ.  

South Korean Man Married A Pillow

 

Follow Us:
Download App:
  • android
  • ios